ಬಂಟ್ವಾಳ: ರಾಮಾಯಣ ಯುದ್ಧದ ಕಾಲದಲ್ಲಿ ರಾವಣನ ತಮ್ಮ ವಿಭೀಷಣ ರಾಮನ ಕಡೆಗೆ ಬಂದಿದ್ದ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ರಾಜ್ಯಸಭೆ ಚುನಾವಣೆ ಫಲಿತಾಂಶದ ಕುರಿತು ಬಂಟ್ವಾಳದಲ್ಲಿ ಪ್ರತಿಕ್ರಿಯಿಸಿದರು.
ರಾಜ್ಯಸಭೆ ಚುನಾವಣೆಯ ಮತದಾನದ ಸಂದರ್ಭ ನಮಗೆ ಕಾಂಗ್ರೆಸ್ ನವರೂ ಬೆಂಬಲ ಕೊಟ್ಟಿದ್ದಾರೆ. ಜೆಡಿಎಸ್ ನವರೂ ಕೊಟ್ಟಿದ್ದಾರೆ ಎಂದ ಅವರು, ಎ ಟೀಮ್, ಬಿ ಟೀಮ್ ಎಂದೇನಿಲ್ಲ. ನಮ್ಮ ನಾಯಕರು, ಕಾರ್ಯವೈಖರಿಯನ್ನು ನೋಡಿ ಬೆಂಬಲಿಸುವವರು ಇದ್ದಾರೆ.
ಚುನಾವಣೆಯಲ್ಲಿ ಬೆಂಬಲಿಸುವವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು. ರಾಜಕೀಯ ಧ್ರುವೀಕರಣ ಎಂಬುದು ನಿಂತ ನೀರಲ್ಲ. ಆಗ್ತಾನೇ ಇರುತ್ತೆ. ದೇಶದ ಹಿತದೃಷ್ಟಿಯಲ್ಲಿ ಯಾರಾದರೂ ನಮ್ಮ ಪಾರ್ಟಿಗೆ ಬರುತ್ತೇನೆ ಎಂದರೆ ಸ್ವಾಗತಿಸುತ್ತೇವೆ ಎಂದರು. ನಾವು ಪಕ್ಷಾಂತರವನ್ನೇ ಉದ್ದೇಶವಾಗಿಟ್ಟು ರಾಜಕಾರಣ ಮಾಡಲ್ಲ. ಕೂಡೋ ಲೆಕ್ಕನೇ ಯಶಸ್ಸು ಕಾಣುವುದು ಎಂದರು.
PublicNext
11/06/2022 04:19 pm