ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ನಾಯಕರ ಅವಹೇಳನ : ವಿಶ್ವ ಹಿಂದೂ ಪರಿಷತ್ ನಿಂದ ಪ್ರತಿಭಟನೆ

ಮಂಗಳೂರು: ಲವ್ ಜಿಹಾದ್, ಮತಾಂತರ, ಗೋಹತ್ಯೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ನಾಯಕರ ಅವಹೇಳನ ಖಂಡಿಸಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯಲ್ಲಿ ಭಜರಂಗ ದಳದ ಪ್ರಾಂತ ಸಂಚಾಲಕ ಮುರಳೀ ಕೃಷ್ಣ ಹಂಸತ್ತಡ್ಕ ಮಾತನಾಡಿ, ಹಿಂದೂ ಸಮಾಜವನ್ನು ಕೆಣಕಬೇಡಿ. ಪ್ರತ್ಯುತ್ತರ ಕೊಡಲು ಮನಸ್ಸು ಮಾಡಿದರೆ ಗುಜರಾತ್, ಅಯೋಧ್ಯೆಯ ಇತಿಹಾಸವನ್ನು ತಿರುಚಿ ನೋಡಿ ಎಂದು ಎಚ್ಚರಿಕೆ ನೀಡಿದರು.

ಅಡ್ಯಾರ್ ನಲ್ಲಿ ಪ್ರತಿಭಟನೆ ನಡೆಸಿದ ನಾಯಿಗಳು ಬಾಲದ ಮುಖಾಂತರ ಶರೀರವನ್ನು ಅಲ್ಲಾಡಿಸಲು ಪ್ರಯತ್ನ ಮಾಡಿದೆ. ದಲಿತರೊಂದಿಗೆ ನಾವಿದ್ದೇವೆಂದು ಹೇಳುವ 14 ವರ್ಷದ ದಲಿತ ಬಾಲಕಿಯ ಹತ್ಯೆಗೆ ನ್ಯಾಯ ಕೊಟ್ಟಿಲ್ಲ. ಯಾಕೆಂದರೆ ಎಸ್ ಡಿಪಿಐ ನಾಯಿಗಳ ಸಂತತಿಯಿಂದ ಬಾಲಕಿಯ ಹತ್ಯೆಯಾಗಿದೆ.

ನಮ್ಮ ನಂಬಿಕೆಗಳಿಗೆ ಘಾಸಿ ಮಾಡಿದರೆ ನಾವು ಜಾಲತಾಣಗಳಲ್ಲಿ ಭಾವಚಿತ್ರ ವಿಕೃತಿ ಮಾಡುವುದಿಲ್ಲ. ಅಟ್ಟಾಡಿಸಿ ಹೊಡೆಯುತ್ತೇವೆ ಎಂದು ಹೇಳಿದರು.

ವಿಎಚ್ ಪಿ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಕಾರ್ಯದರ್ಶಿ ಶಿವಾನಂದ ಮೆಂಡನ್, ಭುಜಂಗ ಕುಲಾಲ್, ಸುರೇಖಾ ರಾಜ್, ಸಂಜೀವ ಸೂಟರ್ ಪೇಟ್, ಮನೋಹರ್ ಸುವರ್ಣ, ಹರೀಶ್ ಕುಮಾರ್, ರವಿ ಅಸೈಗೋಳಿ ಇನ್ನಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

06/06/2022 08:13 pm

Cinque Terre

7.38 K

Cinque Terre

0

ಸಂಬಂಧಿತ ಸುದ್ದಿ