ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

ಕುಂದಾಪುರ: ಉಪ್ಪಿನಕುದ್ರುವಿನಲ್ಲಿ ನಡೆದ ಲವ್ ಜಿಹಾದ್ ಪ್ರಕರಣದ ಹಿಂದಿನ ಶಕ್ತಿಗಳ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಪರಾರಿಯಾದ ಆರೋಪಿಗಳು ಕೇರಳದಲ್ಲಿ ಇದ್ದರು. ಅಲ್ಲಿ ಲವ್ ಜೆಹಾದ್ ಗೆ ತರಬೇತಿ ನೀಡುವ ಸಂಸ್ಥೆಯೇ ಕಾರ್ಯಾಚರಿಸುತ್ತಿದೆ. ಘಟನೆಯ ಹಿಂದಿನ ಸಂಘಟನೆ, ಶಕ್ತಿಗಳ ಮುಖವಾಡ ಬಯಲಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.

ಅವರು ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ ವಿಹಿಂಪ ಹಾಗೂ ಬಜರಂಗದಳ ವತಿಯಿಂದ ನಡೆದ ಲವ್ ಜೆಹಾದ್ ವಿರುದ್ಧದ ಪ್ರತಿಭಟನೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲ ದಿನಗಳ ಹಿಂದೆ ಇಲ್ಲಿನ ಶಿಲ್ಪಾ ಎಂಬ ಯುವತಿ ವಿಷ ಸೇವಿಸಿ ಆತ್ಮಹತ್ಯೆಮಾಡಿಕೊಂಡಿದ್ದರು.ಈಕೆಯನ್ನು ಪ್ರೀತಿಸಿ ಮದುವೆಯಾಗುವಂತೆ ಒತ್ತಾಯಮಾಡುತ್ತಿದ್ದ ಅಝೀಝ್ ಎಂಬಾತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.ಈ ಹಿನ್ನೆಲೆಯಲ್ಲಿ ಅಝೀಝ್ ನನ್ನು ಪೊಲೀಸರು ಬಂಧಿಸಿದ್ದರು.

Edited By : Manjunath H D
Kshetra Samachara

Kshetra Samachara

01/06/2022 01:54 pm

Cinque Terre

10.18 K

Cinque Terre

4

ಸಂಬಂಧಿತ ಸುದ್ದಿ