ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೇಂದ್ರ ಸರಕಾರಕ್ಕೆ ಎಂಟು ವರ್ಷ: ಮೋದಿ ಕೊಂಡಾಡಿದ ಸಿಎಂ ಬೊಮ್ಮಾಯಿ

ಮಣಿಪಾಲ: ಕೇಂದ್ರ ಸರಕಾರ ಎಂಟು ವರ್ಷ ಪೂರೈಕೆ ಮಾಡಿದ ಸಂದರ್ಭ ಮಣಿಪಾಲದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿ ಎಂ ಬಸವರಾಜ್ ಬೊಮ್ಮಾಯಿ ಮೋದಿಯನ್ನು ಕೊಂಡಾಡಿದರು. ಮೋದಿ ಸರಕಾರಕ್ಕೆ ಎಂಟು ವರ್ಷ ಪೂರ್ಣವಾಯ್ತು. ಸರಕಾರದಿಂದ 8 ವರ್ಷದಲ್ಲಿ ಆದ ಲಾಭ ಏನು ಎಂಬ ರಿಪೋರ್ಟ್ ಕೊಡುತ್ತೇವೆ.ಇದೇ ಸಮಯದಲ್ಲಿ ನಮ್ಮ ಸ್ವಾತಂತ್ರದ ಅಮೃತ ಮಹೋತ್ಸವವೂ ನಡೆಯುತ್ತಿದೆ.

ಮೋದಿ ಅಧಿಕಾರ ವಹಿಸಿಕೊಂಡಾಗ ಇದ್ದ ಸ್ಥಿತಿ ಏನು ಎಂಬ ಬಗ್ಗೆ ಚರ್ಚೆ ಆಗಬೇಕು.ಮೋದಿ ಅವರು ಗುಜರಾತ್ ಸಿಎಂ ಆಗಿದ್ದ ಸಮಯದಲ್ಲೂ ರಿಪೋರ್ಟ್ ಕಾರ್ಡ್ ಕೊಡುತ್ತಿದ್ದರು.ಈಗಲೂ ಕೊಡುತ್ತಿದ್ದಾರೆ ಎಂದರು.

ಕೋವಿಡ್ ಸಮಯದಲ್ಲಿ ಆತ್ಮ ನಿರ್ಭರ ಭಾರತದ ಕರೆಯನ್ನು ಮೋದಿ ನೀಡಿದರು.ಪ್ರತಿಯೊಂದು ರಂಗದಲ್ಲೂ ಭಾರತ ಸ್ವಾವಲಂಬನೆ ಸಾಧಿಸಬೇಕು ಎನ್ನುವ ದೃಷ್ಟಿಯಿಂದ ಕೆಲಸ ಮಾಡಿದರು.ಆಹಾರ, ಅರೋಗ್ಯ ಮತ್ತು ಉದ್ಯೋಗ ಭದ್ರತೆ ಗೆ ಅನೇಕ ಗರೀಬ್ ಕಲ್ಯಾಣ್ ಯೋಜನೆಗಳು ಜಾರಿಯಾಗಿವೆ.ಅಭಿವೃದ್ಧಿಯಲ್ಲಿ ಜನರು ಫಲಾನುಭವಿ ಆಗದೇ ಪಾಲುದಾರರಾಗಬೇಕು ಎಂಬುದು ಪ್ರಧಾನಿಯವರ ಆಶಯ.ಸಬ್ಕ ಸಾಥ್ ಸಬ್ಕ ವಿಕಾಸ್ ಧ್ಯೇಯ ನಮ್ಮದು.ಹಿಂದಿನ ಪ್ರಧಾನಿಗಳು ಕೆಲವು ವಿಷಯದ ಬಗ್ಗೆ ತನಾಡಲೂಹೆದರುತ್ತಿದ್ದರು.ಪ್ರತೀ ಮನೆಗೆ ಕುಡಿಯುವ ನೀರು ಮುಟ್ಟಿಸಲು ಮೋದಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.ಕರ್ನಾಟಕದಲ್ಲಿ 25 ಲಕ್ಷ ಮನೆಗಳಿಗೆ ಜಲ ಜೀವನ್ ಯೋಜನೆ ತಲುಪಿಸಿದ್ದೇವೆ.ಈ ವರ್ಷ ಮತ್ತೆ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದರು.

ಪ್ರಧಾನಿಯವರ ಆಶಯದಂತೆ ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ಎಲ್ ಪಿ ಜಿ ವಿತರಣೆಗೆ ವ್ಯಾಪಕ ಯೋಜನೆ ಹಮ್ಮಿಕೊಂಡಿದ್ದೇವೆ ಎಂದ ಅವರು ಪ್ರತೀ ಮನೆಗೆ ವಿದ್ಯುತ್ ಮುಟ್ಟಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತೇವೆ.ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮತ್ತು ಕಸ ವಿಲೇವಾರಿಗೆ ಅನುದಾನ ನೀಡಿದ್ದೇವೆ.ಪ್ರತೀ ರೈತರಿಗೆ 10 ಸಾವಿರ ಬೆಂಬಲ ಮೊತ್ತ ವಿತರಣೆ ಆಗುತ್ತಿದೆ. ಮುದ್ರಾ ಯೋಜನೆಯಿಂದ ಪ್ರತೀ ಜಿಲ್ಲೆಗಳಲ್ಲಿ ಸಾವಿರಾರು ಜನರಿಗೆ ಉಪಯೋಗವಾಗಿದೆ ಎಂದರು.

ಹೊಸಭಾರತ ನಿರ್ಮಾಣಕ್ಕೆ ಮೋದಿ ಸರಕಾರದಿಂದ ನಿರಂತರ ಪರಿಶ್ರಮ ನಡೆಸುತ್ತಿದೆ ಎಂದ ಅವರು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಯೋಜನೆ ಮೂಲಕ ನೇರವಾಗಿ ಫಲಾನುಭವಿಗಳಿಗೆ ಲಾಭ ಸಿಗುತ್ತಿದೆ. ಪ್ರಧಾನಿ ಮೋದಿ ಮುಂದಿನ 25 ವರ್ಷಗಳನ್ನು ದೃಷ್ಟಿಯಲ್ಕಿಟ್ಟು ಅಮೃತ ಕಾಲ ಕಲ್ಪನೆಯಡಿ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ ಎಂದರು.

Edited By : Manjunath H D
PublicNext

PublicNext

01/06/2022 12:53 pm

Cinque Terre

24.14 K

Cinque Terre

0

ಸಂಬಂಧಿತ ಸುದ್ದಿ