ಮಣಿಪಾಲ: "ಆಜಾದಿ ಕಾ ಅಮೃತ್ ಮಹೋತ್ಸವ್" ಅಂಗವಾಗಿ ಭಾರತ ಸರ್ಕಾರದಿಂದ ಪ್ರಾಯೋಜನೆಗೊಂಡ ವಿವಿಧ ಯೋಜನೆಗಳ ಕಾರ್ಯಕ್ರಮಗಳ ಕುರಿತಾಗಿ ಫಲಾನುಭವಿಗಳೊಂದಿಗೆ ಇಂದು ಪ್ರಧಾನ ಮಂತ್ರಿ ಹಿಮಾಚಲ ಪ್ರದೇಶದ ಶಿಮ್ಲಾದಿಂದ ವೀಡಿಯೋ ಸಂವಾದ ನಡೆಸಿದರು.
ಈ ಕಾರ್ಯಕ್ರಮವನ್ನು ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಕೆ. ರಘುಪತಿ ಭಟ್ ಭಾಗಿಯಾದರು.
ಇದೇ ವೇಳೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಉಡುಪಿ ಜಿಲ್ಲೆಯ 13 ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
Kshetra Samachara
31/05/2022 03:40 pm