ಪುತ್ತೂರು: ಬೆಲೆ ಏರಿಕೆ ವಿರೋಧಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಬಿ.ಎಂ ಭಟ್ ಕಳೆದ ಏಳು ವರ್ಷಗಳ ಬಿಜೆಪಿ ಆಡಳಿತದ ಮಹಾನ್ ಕೊಡುಗೆಯಾದ ಬೆಲೆ ಏರಿಕೆಯ ಬಿಸಿಯಿಂದ ಭಾರತದ ಜನತೆ ತತ್ತರಿಸುವಂತಾಗಿದೆ. ಬಿಜೆಪಿ ಜನಪರ ಕಾಳಜಿ ಇಲ್ಲದ ಪಕ್ಷವೆಂದು ಸಾಬೀತು ಮಾಡಿದೆ. ಈ ಬೆಲೆ ಏರಿಕೆ ಅನಿವಾರ್ಯವಾದುದ್ದಲ್ಲ. ಸರಕಾರದ ಪ್ರಯೋಜಿತ ಕೃತಕ ಸೃಷ್ಟಿ ಎಂದರು.
ಲೂಟಿಕೋರರ ಜೊತೆ ಬಿಜೆಪಿ ಮಾಡಿಕೊಂಡ ದುಷ್ಟ ಒಪ್ಪಂದವೇ ಇವತ್ತು ಬೆಲೆ ಏರಿಕೆಗೆ ಕಾರಣವಾಗಿದೆ ಎಂದ ಅವರು ಕೈಗಾರಿಕೆಗಳ ನಾಶ, ಖಾಸಗೀಕರಣ ಮಾಡುವ ಸರಕಾರದ ಧೋರಣೆಯಿಂದ ಜನರಿಗೆ ನಿರುದ್ಯೋಗದ ಕೊಡಗೆ ನೀಡಿ ಆದಾಯವು ಇಲ್ಲದಂತೆ ಮಾಡಲಾಗಿದೆ. ನಿರುದ್ಯೋಗದಿಂದ ಆದಾಯ ಕುಸಿತದಿಂದ ಕಂಗಾಲದ ಜನರಿಗೆ ಸುಳ್ಳುಗಳ ಸಮರ್ಥನೆ ನೀಡಿ ನಂಬಿಸಲಾಗಿದೆ. ತನ್ನ ದುಷ್ಟ ನೀತಿಗಳನ್ನು ಮರೆಮಾಚಲು ಮುಸ್ಲಿಂರನ್ನು ಕೃತಕ ಶತ್ರುಗಳನ್ನಾಗಿಸಿ ಹಿಂದು ರಕ್ಷಣೆಯ ನಾಟಕ ಆಡುತ್ತಿದೆ. ಬಿಜೆಪಿಯ ದುಷ್ಟ ನೀತಿ ಅರ್ಥ ಮಾಡಿಕಕೊಳ್ಳದಿದ್ದರೆ ಹಿಂದುಗಳು ಮಾತ್ರವಲ್ಲ ಭಾರತೀಯರೆಲ್ಲರೂ ನಾಶದತ್ತ ಸಾಗಿ ಭಾರತದ ಭವಿಷ್ಯವೇ ನಾಶವಾಗಲಿದೆ ಎಂದರು.
Kshetra Samachara
26/05/2022 02:29 pm