ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾರಾಯಣ ಗುರುಗಳ ಅನುಯಾಯಿಗಳಾದ ಬಿಲ್ಲವರು ಕಾಂಗ್ರೆಸ್ ಗೆ ಓಟ್ ಹಾಕೋದಿಲ್ಲ

ಮಂಗಳೂರು: ಬಿಲ್ಲವರು ರಾಷ್ಟ್ರಪ್ರೇಮಿಗಳು, ರಾಷ್ಟ್ರೀಯವಾದಿಗಳು, ಜಾತಿವಾದಿಗಳಲ್ಲ. ಅವರು ಅಪ್ಪಟ ನಾರಾಯಣ ಗುರುಗಳ ಅನುಯಾಯಿಗಳು‌. ಆದ್ದರಿಂದ ಅವರು ತಪ್ಪಿಯೂ ಕಾಂಗ್ರೆಸ್ ಗೆ ಓಟ್ ಹಾಕೋದಿಲ್ಲ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದರು.

ನಗರದ ಕೊಡಿಯಾಲಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲೆಯ ಕಾಂಗ್ರೆಸ್ ನಲ್ಲಿ ನಾರಾಯಣ ಗುರುಗಳ ಅನುಯಾಯಿ ಜನಾರ್ದನ ಪೂಜಾರಿ ಓರ್ವರೇ ಇರೋದು. ಬೇರೆಯವರು ಕಾಂಗ್ರೆಸ್ ನ ಅನುಯಾಯಿಗಳಷ್ಟೇ. ಇದೊಂದು 2023ರ ಚುನಾವಣೆ ಎದುರಿಸಲು ಮಾಡುತ್ತಿರುವ ಷಡ್ಯಂತರದ ಭಾಗ. ಕರಾವಳಿಯಲ್ಲಿ ಅತ್ಯಂತ ಪ್ರಬಲ ಸಮುದಾಯವಾದ ಬಿಲ್ಲವ ಯುವಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿಯಲ್ಲಿದ್ದಾರೆ. ಆದ್ದರಿಂದ ಅವರನ್ನು ಯೂಟರ್ನ್ ಮಾಡಲು ಈ ರೀತಿ ಮಾಡಲಾಗುತ್ತಿದೆ. ಆದರೆ ಈ ಜನ್ಮದಲ್ಲಿ ಬಿಲ್ಲವರನ್ನು ಕಾಂಗ್ರೆಸ್ ಗೆ ಸೆಳೆಯಲು ಸಾಧ್ಯವಿಲ್ಲ. ಬಿಲ್ಲವರು ತಪ್ಪಿಯೂ ಕಾಂಗ್ರೆಸ್ ಗೆ ಓಟ್ ಹಾಕೋದಿಲ್ಲ. ಹಿಜಾಬ್ ಬೇಕು ಕಿತಾಬ್ ಬೇಡ ಎಂದು ಹೇಳುವ ಕಾಂಗ್ರೆಸ್ ಗರಿಗೆ ಬಿಲ್ಲವರು ಮತದಾನ ಮಾಡೋದಿಲ್ಲ ಎಂದರು‌.

ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳಿಗೆ ಪ್ರೋತ್ಸಾಹ ಕೊಟ್ಟಿಲ್ಲ. ಆದ್ದರಿಂದ ಇಂದು ವಿದ್ಯಾರ್ಥಿಗಳಿಗೆ ಅಗತ್ಯವಿಲ್ಲದ ಮೊಘಲ್ ದೊರೆಗಳ, ಟಿಪ್ಪು ಕಾಲದ ಇತಿಹಾಸವನ್ನು ಬಿಜೆಪಿ ಸರಕಾರ ತೆಗೆದು ಕ್ರಾಂತಿಕಾರಿ ಪುರುಷರ ಇತಿಹಾಸವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಿದೆ ಎಂದರು.

ಬಿಜೆಪಿ ಸರಕಾರ ರಾಜ್ಯದಲ್ಲಿ ನಾಲ್ಕು ಕಡೆಗಳಲ್ಲಿ ನಾರಾಯಣ ಗುರು ವಸತಿ ಶಾಲೆಯನ್ನು ನಿರ್ಮಾಣ ಮಾಡುತ್ತಿದೆ. ಇದರ ಬಗ್ಗೆ ಯಾವನೇ ಓರ್ವ ಕಾಂಗ್ರೆಸ್ ನವನು ಸ್ವಾಗತಿಸಲಿಲ್ಲ. ಈ ಬಾರಿ ಎಪ್ರಿಲ್ ಗೆ ನಾರಾಯಣ ಗುರುಗಳ ಶಿವಗಿರಿ ಆಶ್ರಮಕ್ಕೆ ಹೋಗಿದ್ದ ದೇಶದ ಪ್ರಧಾನಿ ಮೋದಿಯವರು, ನಾರಾಯಣ ಗುರುಗಳ ತತ್ತ್ವ ಚಿಂತನೆ ಭಾರತದ ಮಣ್ಣಿಗೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಹತ್ತಿರವಾಗಿರುವಂತದ್ದು ಎಂದು ಹೇಳಿದ್ದರು. ಮೋದಿವರನ್ನು ಹೊರತುಪಡಿಸಿ ಬೇರೆ ಯಾವುದೇ ಒಬ್ಬ ಪ್ರಧಾನಿ ಶಿವಗಿರಿಗೆ ನಾಲ್ಕು ಬಾರಿ ಭೇಟಿ ನೀಡಿಲ್ಲ. ಆದ್ದರಿಂದ ನಾರಾಯಣ ಗುರುಗಳಿಗೆ ಬಿಜೆಪಿ ವಿರುದ್ಧವಿದೆಯೇ ಎಂದು ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು.

Edited By : Nagesh Gaonkar
Kshetra Samachara

Kshetra Samachara

21/05/2022 09:22 pm

Cinque Terre

14.78 K

Cinque Terre

2

ಸಂಬಂಧಿತ ಸುದ್ದಿ