ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾರಾಯಣ ಗುರುಗಳನ್ನು ಪಠ್ಯ ದಿಂದ ತೆಗೆಯುವುದು ಖಂಡನೀಯ: ಯು ಆರ್ ಸಭಾಪತಿ

ಉಡುಪಿ: ನಾರಾಯಣ ಗುರುಗಳಿಗೆ ಹಿಂದೆ ಗಣರಾಜ್ಯೋತ್ಸವ ಸಂದರ್ಭ ಟ್ಯಾಬ್ಲೋ ವಿಚಾರದಲ್ಲಿ ಅಗೌರವ ನೀಡಲಾಗಿತ್ತು.ಇದೀಗ ರಾಜ್ಯ ಸರಕಾರ ನಾರಾಯಣಗುರುಗಳ ಪಾಠವನ್ನು ತೆಗೆಯಲು ಹೊರಟಿರುವುದು ಖಂಡನೀಯ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಯು.ಆರ್ .ಸಭಾಪತಿ ಹೇಳಿದ್ದಾರೆ.

ಉಡುಪಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾರಾಯಣಗುರುಗಳಂತಹ ಮಹಾನ್ ದಾರ್ಶನಿಕರನ್ನು ಕಡೆಗಣಿಸುತ್ತಾ ಬಂದಿವೆ.ಈ ಹಿಂದೆ ಕೇಂದ್ರ ಸರಕಾರ ಅವರ ಟ್ಯಾಬ್ಲೋ ರದ್ದು ಮಾಡಿತ್ತು.ಇದೀಗ ರಾಜ್ಯ ಸರ್ಕಾರ ಪುಸ್ತಕದಿಂದ ಅವರ ಪಾಠವನ್ನು ತೆಗೆಯುತ್ತಿರುವುದು ಹೇಯ ಕೃತ್ಯ.ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು.ನಾರಾಯಣ ಗುರುಗಳು ಸರ್ವ ಧರ್ಮೀಯರನ್ನು ಒಟ್ಟಿಗೆ ಕರೆದುಕೊಂಡು ಹೋದ ಮಾನವತಾವಾದಿ. ಹೀಗಾಗಿ ರಾಜ್ಯ ಸರಕಾರ ಇಂತಹ ಕೆಲಸಕ್ಕೆ ಕೈ ಹಾಕಬಾರದು ಎಂದು ಸಭಾಪತಿ ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/05/2022 03:17 pm

Cinque Terre

11.81 K

Cinque Terre

2

ಸಂಬಂಧಿತ ಸುದ್ದಿ