ಮಂಗಳೂರು: ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗುತ್ತಿದೆ. ಎಲ್ಲಾ ರಾಜ್ಯಗಳಲ್ಲೂ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲಾ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಬಿಜೆಪಿಯವರ ಸರ್ಕಾರದಲ್ಲಿ ಹೋಟೆಲ್ ನಲ್ಲಿರುವಂತೆ ಭ್ರಷ್ಟಾಚಾರದ ಮೆನು ಕಾರ್ಡ್ ಇರಬಹುದು. ಸಿಎಂ, ಮಂತ್ರಿ, ಅಧಿಕಾರಿಯಾಗಲು ಇಂತಿಷ್ಟು ಕೋಟಿ ಎಂದು ಇದೆ. ಇವರದ್ದು ಮೆನು ಕಾರ್ಡ್ ಭ್ರಷ್ಟಾಚಾರದ ಸರ್ಕಾರವಾಗಿದೆ. ಜನರು ಈ ಸರ್ಕಾರದ ಬಗ್ಗೆ ಭ್ರಮನಿರಸನರಾಗಿದ್ದಾರೆ ಎಂದರು.
ಭ್ರಷ್ಟಾಚಾರ, ಮಂತ್ರಿಮಂಡಲ ಇದಿಷ್ಟೇ ಚರ್ಚೆಯಾಗುತ್ತಿದೆ. ಯಾವುದೇ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ಕಾರ ತಯಾರಿಲ್ಲ. ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭೀತಿ ಸರ್ಕಾರಕ್ಕಿದೆ. ಪಲಾಯನ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಆದಷ್ಟು ಬೇಗ ಚುನಾವಣೆಯನ್ನು ನಡೆಸಬೇಕು ಸಲೀಂ ಅಹ್ಮದ್ ಹೇಳಿದ್ದಾರೆ.
PublicNext
20/05/2022 10:44 pm