ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೇಂದ್ರ ಸರ್ಕಾರದ ಎನ್ಇಪಿ ನಾಗ್ಪುರ ಎಜುಕೇಶನ್ ಪಾಲಿಸಿ; ಡಿಕೆಶಿ ಟೀಕೆ

ಮಂಗಳೂರು: ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ (ಎನ್ಇಪಿ)ಯು ನಾಗ್ಪುರ ಎಜುಕೇಶನ್ ಪಾಲಿಸಿ. ಇದೀಗ ಎಸ್ಎಸ್ಎಲ್‌ಸಿ ಪಠ್ಯದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಭಗತ್ ಸಿಂಗ್ ಪಠ್ಯವನ್ನು ಕೈಬಿಡಲಾಗಿದೆ‌. ಪಠ್ಯದಿಂದ ಅವರ ವಿಚಾರಗಳನ್ನು ಕೈಬಿಡಬಹುದೇ ಹೊರತು ಚರಿತ್ರೆಯಿಂದಲ್ಲ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ‌. ಆಗ ಮತ್ತೆ ಅವರನ್ನು ಪಠ್ಯದಲ್ಲಿ ಸೇರಿಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟ ವಿಚಾರದಲ್ಲಿ ಸಚಿವರಾದ ಸುನಿಲ್ ಕುಮಾರ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ವಾಭಿಮಾನ ಇದ್ದರೆ ರಾಜೀನಾಮೆ ನೀಡಬೇಕಿತ್ತು. ಆದರೆ ಅವರಿಗೆ ಸ್ವಾಭಿಮಾನ ಮುಖ್ಯವಲ್ಲ, ಅಧಿಕಾರ ಮುಖ್ಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಕರಾವಳಿಗೆ ವಿಶೇಷ ಒತ್ತು ನೀಡುತ್ತಿದೆ‌. ಆದ್ದರಿಂದ ಕರಾವಳಿಗೆ ಪ್ರತ್ಯೇಕವಾದ ಪ್ರಣಾಳಿಕೆ ಮಾಡಲು ಚಿಂತನೆ ನಡೆಸಿದ್ದೇವೆ. ಈ ಮೂಲಕ ಎಲ್ಲಾ ಸಮುದಾಯಗಳಿಗೆ ಸೇರಿಸಿ ಪ್ರಣಾಳಿಕೆ ಮಾಡಲಾಗುತ್ತದೆ. ಧಾರ್ಮಿಕದ ವಿಚಾರದಲ್ಲಿ ಪರಸ್ಪರ ದ್ವೇಷದ ರಾಜಕಾರಣ ಸೃಷ್ಟಿಸುವ ಕಾರ್ಯದಲ್ಲಿ ಬಿಜೆಪಿ ತೊಡಗಿದೆ. ಉದ್ಯೋಗ ಸೃಷ್ಟಿ, ಆದಾಯ ವೃದ್ಧಿಗೆ ಒತ್ತು ನೀಡದೆ ಭ್ರಷ್ಟಾಚಾರ ತುಂಬಿ ರುವ ಬಿಜೆಪಿಗೆ ಅಧಿಕಾರ ನೀಡಿದ ಕಾರಣ ಜನರು ನಿರಂತರ ಭವಣೆ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಸಮಗ್ರ ಜನರ ಹಿತಕ್ಕಾಗಿ ಕಾಂಗ್ರೆಸ್‌ಗೆ ಅವಕಾಶ ನೀಡಬೇಕು ಪಕ್ಷ ಯುವಕರು, ಮಹಿಳೆಯರಿಗೆ ಅವಕಾಶ ನೀಡಲಿದೆ ಎಂದು ಮನವಿ ಮಾಡುವುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Edited By : Manjunath H D
PublicNext

PublicNext

19/05/2022 11:00 pm

Cinque Terre

59.55 K

Cinque Terre

5

ಸಂಬಂಧಿತ ಸುದ್ದಿ