ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಅಕ್ರಮ ಮರಳುಗಾರಿಕೆ ವಿರುದ್ಧ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ

ವಿಟ್ಲ: ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಪ್ರತಿಭಟನೆ ಬುಡೋಳಿ ಜಂಕ್ಷನ್‌ನಲ್ಲಿ ನಡೆಯಿತು.

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಶಾಸಕ ರಾಜೇಶ್ ನಾಯ್ಕ್ ಬೆಂಬಲಿಗರು ಒಂದು ಕಡೆಗೆ ಪರ್ಮಿಟ್ ಪಡೆದು ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದಾರೆ. ರಾಜಾರೋಷವಾಗಿ ಯಂತ್ರಗಳ ಮೂಲಕ ತೆಗೆಯಲಾಗುತ್ತಿದೆ‌. ನಮ್ಮನ್ನು ತಡೆಯುವವರು ಯಾರೂ ಎನ್ನುತ್ತಿದ್ದಾರೆ. ಮರಳುಗಾರಿಕೆಯಿಂದ ಮಸೀದಿ, ದೇವಸ್ಥಾನಕ್ಕೂ ತೊಂದರೆಯಾಗುತ್ತಿದೆ. ಇದು ದೇವಸ್ಥಾನದ ಅಸ್ಥಿತ್ವದ ಮೇಲೆ ಪರಿಣಾಮ ಬೀಳುತ್ತಿದೆ ಎಂದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಶಾಸಕರಿಗೆ, ಇಲಾಖೆಗೆ ಮಾಮೂಲಿ ಹೋಗುತ್ತಿದೆ. ದುಪ್ಪಟ್ಟು ಹಣ ನೀಡಿ ಬಡವರು ಮರಳು ಖರೀಸುವಂತಾಗಿದೆ. ಜನರಿಗೆ ಪರಿಹಾರ ಒದಗಿಸುವುದು ರಾಜಧರ್ಮವಾಗಿದೆ. ಆದರೆ ಇಲ್ಲಿ ಮರಳಿನಿಂದ ಲಕ್ಷ ಲಕ್ಷಾ ನುಂಗುತ್ತಿದ್ದಾರೆ. ಮರಳು ಅಡ್ಡೆಗೆ ದಾಳಿ ನಡೆಸಿದವರಿಗೆ ವರ್ಗಾವಣೆ ಬೆದರಿಕೆ ಬರುತ್ತಿದೆ ಎಂದರು.

Edited By : Manjunath H D
Kshetra Samachara

Kshetra Samachara

11/05/2022 06:58 pm

Cinque Terre

5.85 K

Cinque Terre

1

ಸಂಬಂಧಿತ ಸುದ್ದಿ