ಮಂಗಳೂರು: ಬಿಜೆಪಿಗೆ ಸದ್ಯ ಆಪರೇಷನ್ ಕಮಲದ ಅಗತ್ಯವಿಲ್ಲ. ನಮ್ಮ ಸಿದ್ಧಾಂತ ಒಪ್ಪಿ ಬಂದವರಿಗೆ ಸ್ವಾಗತ ಎಂದು
ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಇಂದು ಸಂಜೆ ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮಗೆ ಆಪರೇಷನ್ ಕಮಲ ಈಗ ಅಗತ್ಯವಿಲ್ಲ. ಯಾರೂ ಪಕ್ಷಕ್ಕೆ ಬರುತ್ತೇವೇ ಅಂತಿದ್ದಾರೋ ಅವರನ್ನು ತೆಗೆದುಕೊಳ್ಳುತ್ತೇವೆ.
ಬಿಜೆಪಿಗೆ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಬಂದ ಬಳಿಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಮುಂದಿನ ದಿನಗಳಲ್ಲಿ ಆಗುತ್ತದೆ ಎಂದ ಅವರು, ಕ್ಯಾಬಿನೆಟ್ ಬದಲಾವಣೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಅಂದ್ರು. ಅತ್ತ ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಯ ಚುನಾವಣೆ ಹಿನ್ನೆಲೆಯಲ್ಲಿ ತತ್ ಕ್ಷಣ ರಾಜಕೀಯ ಮೀಸಲಾತಿ ಬಿಟ್ಟು ಚುನಾವಣೆ ನಡೆಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಹೀಗಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಬೇಕು. ಒಬಿಸಿ ಸಮುದಾಯಕ್ಕೆ ನ್ಯಾಯ ಕೊಡುವ ಕಾರ್ಯ ಬಿಜೆಪಿ ಮಾಡಿತ್ತು.
33% ಕ್ಕೂ ಹೆಚ್ಚು ಮೀಸಲಾತಿ ನೀಡಿ ಚುನಾವಣೆ ನಡೆಸುತ್ತೇವೆ. ಪೇಜ್ ಪ್ರಮುಖ್ ಇದ್ದದ್ದನ್ನು ಪೇಜ್ ಗೆ ಆರು ಮಾಡಿದ್ದೇವೆ. ಬಿಜೆಪಿಯಲ್ಲಿ ಪಂಚರತ್ನಗಳ ತಂಡವಿದೆ. ಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಸಿದ್ದೇವೆ. ಮೂವರ ತಂಡ ಚುನಾವಣಾ ಪ್ರವಾಸ ಮಾಡುತ್ತೇವೆ. ಸ್ಥಳೀಯಾಡಳಿತದ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಪಿಎಂ, ಸಿಎಂ ಯೋಜನೆಯಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಈ ಮೂಲಕ ಚುನಾವಣೆ ಎದುರಿಸುತ್ತೇವೆ ಅಂತಲೇ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
PublicNext
11/05/2022 06:48 pm