ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ 20 ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಲು ಬೇಡಿಕೆ ಬಂದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸುನಿಲ್ ಕುಮಾರ್, '20 ಕಡೆ ಒಬ್ಬನೇ ವ್ಯಕ್ತಿಯನ್ನು ನಿಲ್ಲಿಸುವ ದಾರಿದ್ರ್ಯ ಕಾಂಗ್ರೆಸ್ಸಿಗೆ ಬಂದಿದೆ' ಎಂದು ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕಳೆದ ಬಾರಿ ಸಿದ್ದರಾಮಯ್ಯ ಅವರು ಎರಡು ಕಡೆ ಚುನಾವಣೆಗೆ ನಿಂತಿದ್ದರು. ಒಂದು ಕಡೆ ಸೋತು ಮತ್ತೊಂದು ಕಡೆ ಕಷ್ಟದಿಂದ ಗೆದ್ದಿದ್ದರು. ಈಗ 20 ಕಡೆ ನಿಲ್ಲಲು ಯಾರು ಸಲಹೆ ಕೊಡುತ್ತಾರೋ ಗೊತ್ತಿಲ್ಲ. ಎಷ್ಟು ಕಡೆಯಿಂದ ಅವಕಾಶ ಕೊಡಬೇಕು ಎಂದು ಚುನಾವಣಾ ಆಯೋಗ ನಿರ್ಧಾರ ಮಾಡಲಿ. ಕಾಂಗ್ರೆಸ್‌ನವರಿಗೆ ಬೇರೆ ಅಭ್ಯರ್ಥಿಗಳೇ ಇಲ್ಲ ಅಂತಾಯ್ತು. ಕಾಂಗ್ರೆಸ್ಸನ್ನು ಆ ಭಗವಂತನೇ ಕಾಪಾಡಬೇಕು ಎಂದು ಹೇಳಿದರು
Kshetra Samachara
02/05/2022 12:24 pm