ಉಡುಪಿ: ಪೊಲೀಸ್ ಸ್ಟೇಷನ್ ಮತ್ತು ಪೊಲೀಸರ ಮೇಲೆ ಕಲ್ಲು ತೂರಿ, ರಾಜ್ಯದ ಕಾನೂನಿನ ವಿರುದ್ಧ ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವೆ ,ಹುಬ್ವಳ್ಳಿಯಲ್ಲಿ ಇತ್ತೀಚೆಗೆ ಬೆಂಗಳೂರಿನ ಕೆಜೆ ಹಳ್ಳಿ ,ಡಿಜೆ ಹಳ್ಳಿ ಮಾದರಿಯಲ್ಲಿ ಗಲಭೆ ನಡೆಸಿದ್ದಾರೆ.ಸರಕಾರದ ವಿರುದ್ಧವೇ ಹೋಗುತ್ತೇವೆ ಎಂಬ ದಾಷ್ಟ್ಯತನ ಅಹಂಕಾರ ನಿಲ್ಲಿಸಬೇಕು. ಅಲ್ಪಸಂಖ್ಯಾತರು ಹೆಚ್ಚು ಇರುವ ಕಡೆ ಗಲಭೆ ನಡೆಸುತ್ತೇವೆ ಎಂಬ ಮಾನಸಿಕತೆ ಸರಿಯಲ್ಲ.ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಒಟ್ಟಿಗೇ ಬದುಕಬೇಕು ಎಂಬುದು ನಮ್ಮ ಆಶಯ ಎಂದು ಸಚಿವೆ ಹೇಳಿದ್ದಾರೆ.
PublicNext
23/04/2022 12:41 pm