ಉಳ್ಳಾಲ: ರಾಜ್ಯ ಬಿಜೆಪಿ ಸರಕಾರವು ಪದೇ ಪದೆ ಕಠಿಣ ಕ್ರಮದ ಭರವಸೆಗಳನ್ನೇ ನೀಡುತ್ತಾ ಕಾಲಹರಣ ಮಾಡುತ್ತಿದೆ. ಹಿಂದುತ್ವದ ಆಧಾರದಿಂದ ಅಧಿಕಾರಕ್ಕೇರಿದ್ದೀರಾ... ಮೊದಲು ರಾಷ್ಟದ್ರೋಹಿಗಳನ್ನು ಮಟ್ಟ ಹಾಕುವ ಕೆಲಸ ಮಾಡಿ ಎಂದು ರಾಜ್ಯ ಸರಕಾರಕ್ಕೆ ಭಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು ಕಿವಿಮಾತು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಸ್ಲಿಮರು ನಡೆಸಿದ ಹಿಂಸಾಚಾರವನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟಿನಲ್ಲಿ ಇಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಯಾರೋ ಒಬ್ಬ ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಾಡೋದನ್ನು ಎಡಿಟ್ ಮಾಡಿದ ಪೋಸ್ಟನ್ನು ಶೇರ್ ಮಾಡಿದ್ದಕ್ಕೆ ಹುಬ್ಬಳ್ಳಿಯ ಮುಸ್ಲಿಂ ಪುಂಡರು ಪೊಲೀಸರ ವಾಹನಕ್ಕೇ ಕಲ್ಲು ತೂರಿ ಹಿಂಸಾಚಾರ ನಡೆಸಿದ್ದಾರೆ. ಹಿಂದೂಗಳ ಆರಾಧ್ಯ ದೇವತೆ ಸರಸ್ವತಿ ಮಾತೆಯನ್ನು ವಿಕೃತವಾಗಿ ಚಿತ್ರಿಸಿದ ಮತಾಂಧ ಮುಸ್ಲಿಮನ ವಿರುದ್ಧ ಹಿಂದೂ ಸಂಘಟನೆಗಳು ಕಾನೂನಾತ್ಮಕ ಹೋರಾಟಗಳನ್ನೇ ನಡೆಸಿವೆ ಹೊರತು ಈ ದುರುಳರಂತೆ ಹಿಂಸಾಚಾರಗಳನ್ನು ನಡೆಸಿಲ್ಲ.
ಹಾಗಂತ ನಮ್ಮ ತಾಳ್ಮೆಯನ್ನು ಪರೀಕ್ಷಿಸಲು ಬರಬೇಡಿ. ನಿಮ್ಮ ಕಲ್ಲು- ತಲವಾರುಗಳಿಗೆ ಉತ್ತರಿಸೋ ಶಕ್ತಿ ಹಿಂದೂ ಸಮಾಜಕ್ಕಿದೆ ಎಂದು ಅರ್ಜುನ್ ಮಾಡೂರು ಎಚ್ಚರಿಸಿದರು. ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ ಮೊದಲಾದವರು ಪ್ರತಿಭಟನೆಯಲ್ಲಿದ್ದರು.
Kshetra Samachara
22/04/2022 10:34 pm