ಉಡುಪಿ: ಉಡುಪಿಯ ಹಿಜಾಬ್ ಹೋರಾಟಗಾರ್ತಿಯರ ಹಿಂದೆ ಅಲ್ ಖೈದಾದಂತಹ ಮತಾಂಧ ಸಂಘಟನೆಗಳ ಬೆಂಬಲ ಇದೆ ಎಂದು ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಉಪಾಧ್ಯಕ್ಷ ಯಶಪಾಲ್ ಸುವರ್ಣ ಆರೋಪಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು ಈ ಹಿಂದೆ ಕೂಡ ವಿದ್ಯಾರ್ಥಿನಿಯರು ಮತಾಂಧ ಶಕ್ತಿಗಳ ಬೆಂಬಲದಿಂದ ನ್ಯಾಯಾಲಯದ ಮೆಟ್ಟಿಲೇರಿದ್ದರು. ನಂತರ ಅಲ್ ಖೈದಾ ಸಂಘಟನೆ ವಿಡಿಯೋ ಸಂದೇಶ ಮೂಲಕ ಅವರಿಗೆ ಬೆಂಬಲ ಸೂಚಿಸಿತ್ತು. ಹಾಗಾಗಿ ವಿದ್ಯಾರ್ಥಿನಿಯರು ಬರಿ ವಿದ್ಯಾರ್ಥಿನಿಯರು ಎಂದರೆ ತಪ್ಪಾಗುತ್ತದೆ. ಇವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಶಾಂತಿ-ಸಾಮರಸ್ಯ ಕದಡುವುದೇ ಇವರ ಉದ್ದೇಶ. ಇವತ್ತು ಕೋರ್ಟ್ ತೀರ್ಪು ಇದ್ದರೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೇಳಿದ್ದಾರೆ. ಹಿಜಾಬ್‌ಧಾರಿಗಳಿಂದ ಮುಂದೆ ಯಾವ ರೀತಿಯ ಅಪಾಯ ಎದುರಾಗಬಹುದು ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
Kshetra Samachara
22/04/2022 06:44 pm