ಉಡುಪಿ: ರಾಜ್ಯದಲ್ಲಿ ನಡೆಯುತ್ತಿರುವ ಹಲಾಲ್ ಜಟ್ಕಾದಂತಹ ಧರ್ಮ ಸಂಘರ್ಷದಿಂದ ಕೈಗಾರಿಕಾ ಕ್ಷೇತ್ರಕ್ಕೆ ಯಾವುದೇ ಸಮಸ್ಯೆ ಆಗಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಉಡುಪಿಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಧರ್ಮ ಸಂಘರ್ಷದಿಂದ ಕೈಗಾರಿಕೆ ಕ್ಷೇತ್ರಕ್ಕೆ ಯಾವುದೇ ಸಮಸ್ಯೆ ಇಲ್ಲ. ಆ ವಿಚಾರವೇ ಬೇರೆ, ಈ ವಿಚಾರವೇ ಬೇರೆ. ರಾಜ್ಯದ ವಾತಾವರಣ, ಕೈಗಾರಿಕಾ ನೀತಿ, ಸರ್ಕಾರದ ಸ್ಪಂದನದ ಆಧಾರದಲ್ಲಿ ಕೈಗಾರಿಕೆ ಬರುತ್ತೆ. ಧರ್ಮ ಸಂಘರ್ಷ ಕೈಗಾರಿಕೋದ್ಯಮದ ಮೇಲೆ ಯಾವುದೇ ಪರಿಣಾಮ ಮಾಡಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮೈಕ್ ಬ್ಯಾನ್ ಬೇಡಿಕೆ ವಿಚಾರವಾಗಿ ಮಾತನಾಡಿದ ಅವರು, ಕೆಲವೇ ಮಂದಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನಮ್ಮಂತಹ ಉದ್ದಿಮೆದಾರರು ಆ ಕಡೆ ನೋಡಕ್ಕೆ ಹೋಗಲ್ಲ. ನಮ್ಮದೇ ಒಂದು ಬೇರೆ ಲೋಕ.ಈ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಹಿರಿಯರು ಮಾತನಾಡುತ್ತಾರೆ. ಬಿಜೆಪಿ ಪಕ್ಷದ ವ್ಯವಸ್ಥೆಯಲ್ಲಿ ವಕ್ತಾರರು ಉತ್ತರ ಕೊಡುತ್ತಾರೆ. ಪ್ರತಿಯೊಬ್ಬರು ತಮ್ಮ ಅನಿಸಿಕೆ ಹೇಳಿದರೆ ಗೊಂದಲವಾಗುತ್ತದೆ ಎಂದು ಹೇಳಿದ್ದಾರೆ.
PublicNext
05/04/2022 11:59 am