ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರ ಮುಂದುವರೆದಿದೆ.ಈಗ ಕುಂದಾಪುರ ತಾಲೂಕಿನ ಅಸೋಡು ಬೆಂಕಿಕಾನ ನಂದಿಕೇಶ್ವರ ದೇವಸ್ಥಾನದ ಸರದಿ. ಇಲ್ಲಿನ ವಾರ್ಷಿಕ ಜಾತ್ರೋತ್ಸವದಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಸರಿ ಬಾವುಟಗಳನ್ನು ಕಟ್ಟಿ ಹಿಂದೂಗಳು ವ್ಯಾಪಾರ ಮಾಡುತ್ತಿರುವ ದೃಶ್ಯ ಕಂಡುಬಂತು.
ಈ ವರ್ಷ ಐವತ್ತಕ್ಕೂ ಹೆಚ್ಚು ಮುಸಲ್ಮಾನ ವರ್ತಕರು ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು.ಆದರೆ ಹಿಂದೂಪರ ಸಂಘಟನೆಗಳು ಮುಸಲ್ಮಾನ ವ್ಯಾಪಾರಿಗಳಿಗೆ ವಿರೋಧ ವ್ಯಕ್ತಪಡಿಸಿದ್ದವು.
ಮಾತ್ರವಲ್ಲ ,ಪೋಸ್ಟರ್, ಬ್ಯಾನರ್ ಗಳ ಮೂಲಕ ವ್ಯಾಪಾರಕ್ಕೆ ಅಸಹಕಾರ ನೀಡುವಂತೆ ಪ್ರಚಾರ ಮಾಡಲಾಗುತ್ತಿದೆ. ಅಸೋಡು ನಂದಿಕೇಶ್ವರ ಜಾತ್ರೋತ್ಸವ ಈಗಾಗಲೇಪ್ರಾರಂಭಗೊಂಡಿದ್ದು ,ನಾಳೆತನಕ ನಡೆಯಲಿದೆ.
Kshetra Samachara
31/03/2022 01:54 pm