ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಅಂಚೆ ನೌಕರರ ಧರಣಿ : ಗಮನ ಸೆಳೆದ ಗೋಮುಖ ವ್ಯಾಘ್ರ ಪೋಸ್ಟ್ ಮ್ಯಾನ್ !

ಉಡುಪಿ: ಎರಡು ದಿನಗಳ ರಾಷ್ಟ್ರ ವ್ಯಾಪಿ ಮುಷ್ಕರದ ಪ್ರಯುಕ್ತ ಅಂಚೆ ನೌಕರರು ಉಡುಪಿಯ ಮುಖ್ಯ ಅಂಚೆ ಕಚೇರಿ ಎದುರು ಧರಣಿ ನಡೆಸಿದರು. ಈ ವೇಳೆ ಅಂಚೆ ಇಲಾಖೆಗೆ ತಟ್ಟಿರುವ ಖಾಸಗೀಕರಣದ ಭೂತದ ವಿರುದ್ಧ ಉಡುಪಿ ಅಂಚೆ ಕಚೇರಿಯ ಪೋಸ್ಟ್‌ಮೆನ್ ರಾಘವೇಂದ್ರ ಪ್ರಭು, ಗೋಮುಖವ್ಯಾಘ್ರ ವೇಷ ಧರಿಸಿ ಧರಣಿಯಲ್ಲಿ ಎಲ್ಲರ ಗಮನ ಸೆಳೆದರು.

ಸರಕಾರಿ ಇಲಾಖೆಯನ್ನು ಖಾಸಗಿ ಸಂಸ್ಥೆಗಳು ಆಕ್ರಮಣ ಮಾಡುತ್ತಿವೆ. ಗೋವಿನ ಮುಖವಾಡ ಹಾಕಿಕೊಂಡು ಬರುವ ಈ ಖಾಸಗಿ ಸಂಸ್ಥೆಗಳು ನಿಜವಾದ ಹುಲಿಯಾಗಿರುತ್ತವೆ. ಅವರು ಎಂದಿಗೂ ಸಾಮಾನ್ಯ ನಾಗರಿಕರ, ನೌಕರರ ಹಾಗೂ ಗ್ರಾಹಕರ ಪರವಾಗಿ ಇರುವುದಿಲ್ಲ. ಅವರಿಗೆ ಲಾಭ ಮಾತ್ರ ಮುಖ್ಯವಾಗಿರುತ್ತದೆ. ಆದುದರಿಂದ ಈ ಖಾಸಗೀಕರಣ ನಮಗೆ ಬೇಡ ಎಂಬ ಸಂದೇಶ ಸಾರಲು ಈ ವೇಷ ಹಾಕಿದ್ದೇನೆ’ ಎಂದು ರಾಘವೇಂದ್ರ ಪ್ರಭು ತಿಳಿಸಿದರು.

Edited By : Manjunath H D
Kshetra Samachara

Kshetra Samachara

29/03/2022 11:19 pm

Cinque Terre

10.31 K

Cinque Terre

0

ಸಂಬಂಧಿತ ಸುದ್ದಿ