ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದಲಿತನ ಹತ್ಯೆಗೆ ದನಿಯೆತ್ತಿದ ಎಸ್ ಡಿಪಿಐನಿಂದ ಬೃಹತ್ ಜಾಥಾ

ಮಂಗಳೂರು: ದಲಿತ ಸಮುದಾಯದ ಯುವಕ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಕನ್ಯಾಡಿ ಹತ್ಯೆಯ ವಿರುದ್ಧ ದನಿ ಎತ್ತಿರುವ ಎಸ್ ಡಿಪಿಐನಿಂದ ಇಂದು ಬೆಳ್ತಂಗಡಿಯಿಂದ ಮಂಗಳೂರಿಗೆ ಜಾಥಾ ನಡೆಯಿತು. ಬೆಳಗ್ಗೆ 9.30 ವರೆಗೆ ಹೊರಟಿರುವ ಜಾಥಾ ಸಂಜೆ ವೇಳೆಗೆ ಮಂಗಳೂರಿಗೆ ತಲುಪಿತು. ಜಾಥಾದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದು, ಜಾಥಾದ ಪ್ರತಿಭಟನಾ ಸಭೆ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಆಡಳಿತ ನಡೆಸುತ್ತಿರುವ ಸರಕಾರಕ್ಕೆ ಬದ್ಧತೆಯಿದ್ದಲ್ಲಿ ಹತ್ಯೆಯಾದ ದಲಿತ ದಿನೇಶ್ ಕನ್ಯಾಡಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಿ. ಅಲ್ಲದೆ 2.50 ಎಕರೆ ಭೂಮಿ ಹಾಗೂ ಕುಟುಂಬದ ಓರ್ವರಿಗೆ ಸರಕಾರಿ ಉದ್ಯೋಗ ಕೊಡಿಸಲಿ. ಹತ್ಯೆ ಮಾಡಿದ ಆರೋಪಿ ಬಿಜೆಪಿ ಕಾರ್ಯಕರ್ತ ಕೃಷ್ಣನ ಜಾಮೀನು ತಕ್ಷಣ ರದ್ದುಗೊಳಿಸಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿರುವ ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ ಮತಾಂತರವನ್ನು ಸಮರ್ಥಿಸಿ ಮಾತನಾಡಿ, ಕ್ರೈಸ್ತರು ಎಲ್ಲರನ್ನು ಪ್ರೀತಿಯಿಂದ ಮತಾಂತರ ಮಾಡುತ್ತಾರೆ. ಅನ್ನ ಇಲ್ಲದವರಿಗೆ ಅನ್ನ ಕೊಟ್ಟು, ರಕ್ತ ಇಲ್ಲದವರಿಗೆ ರಕ್ತ ಕೊಟ್ಟು, ಮನೆ ಇಲ್ಲದವರಿಗೆ ಮನೆಯನ್ನು ಕೊಟ್ಟು, ಕಣ್ಣಿಲ್ಲದವರ ಸೇವೆಯನ್ನು ಮಾಡುವ ಮೂಲಕ ಮತಾಂತರ ಮಾಡುತ್ತಾರೆ. ಯಾವತ್ತೂ ಬೆದರಿಸಿ, ಎ.ಕೆ.47 ತೋರಿಸಿ ಮತಾಂತರ ಮಾಡಬೇಕೆಂದಿಲ್ಲ. ಏಸುಕ್ರಿಸ್ತರು ಪ್ರೀತಿ, ಶಾಂತಿಯಿಂದ ಇದ್ದು, ಸತ್ಯವನ್ನು ಹೇಳಿ ಸಮಾಜವನ್ನು ಕಟ್ಟಿ ಎಂದರು. ನಾವು ಅದನ್ನೇ ಮಾಡುತ್ತಿದ್ದೇವೆ ಎಂದು ಹೇಳಿದರು.

Edited By :
Kshetra Samachara

Kshetra Samachara

29/03/2022 10:59 pm

Cinque Terre

5.01 K

Cinque Terre

0

ಸಂಬಂಧಿತ ಸುದ್ದಿ