ಉಡುಪಿ: ಹಿಜಾಬ್ ತೀರ್ಪಿನ ವಿರುದ್ಧ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ,ಉಡುಪಿಯಲ್ಲಿ ಮುಸ್ಲಿಮರು ಅಂಗಡಿ ಮುಂಗಟ್ಟುಗಳನ್ಬು ಮುಚ್ಚಿ ಬೆಂಬಲ ಸೂಚಿಸಿದ್ದಾರೆ.ಆದರೆ ಮುಸ್ಲಿಂ ಬಸ್ ಓನರ್ ಗಳಿಂದ ಬಂದ್ ಗೆ ಬೆಂಬಲ ಸಿಕ್ಕಿಲ್ಲ. ಮುಸ್ಲಿಂ ಸಮುದಾಯದ ಚಾಲಕರು, ನಿರ್ವಾಹಕರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಹೀಗಾಗಿ ಇಂದು ಬಸ್ ಸಂಚಾರ ಎಂದಿನಂತೆ ಇದೆ..ಕೊರೋನಾದಿಂದ ನಾವು ಸಂಪೂರ್ಣ ಜರ್ಜರಿತರಾಗಿದ್ದೇವೆ. ಪ್ರಬಲ ಹಿಂದೂ ಸಮಾಜವನ್ನು ಎದುರುಹಾಕಿಕೊಳ್ಳಲು ನಾವು ತಯಾರಿಲ್ಲ. ನಮಗೆ ಯಾವುದೇ ಹೋರಾಟ, ಪ್ರತಿಭಟನೆ ,ಬಂದ್ ಬೇಡ ಎಂದು ಕೆಲ ಮುಸ್ಲಿಂ ಚಾಲಕರು, ನಿರ್ವಾಹಕರು ಮಾಧ್ಯಮಗಳಿಗೆ ತಿಳಿಸಿದ್ರು.
Kshetra Samachara
17/03/2022 06:47 pm