ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮನೆಬಾಗಿಲಿಗೆ ಕಂದಾಯ ದಾಖಲೆ ಪ್ರಚಾರದ ಗಿಮಿಕ್ : ಮಾಜಿ ಸಚಿವ ಸೊರಕೆ ಟೀಕೆ!

ಉಡುಪಿ: ರಾಜ್ಯ ಸರಕಾರ ಮನೆಬಾಗಿಲಿಗೆ ಕಂದಾಯ ದಾಖಲೆ ಎಂಬ ಯೋಜನೆ ಹಮ್ಮಿಕೊಂಡಿದ್ದು ಇದೊಂದು ಪ್ರಚಾರದ ಗಿಮಿಕ್ ಮಾತ್ರ.ಇದರಿಂದ ಜನರಿಗೆ ಯಾವುದೇ ಪ್ರಯೋಜನವೂ ಇಲ್ಲ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಟೀಕಿಸಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಮನೆ ಬಾಗಿಲಿಗೆ ಕಂದಾಯ ದಾಖಲೆ ಹೆಸರಲ್ಲಿ ಇವತ್ತು ಪಂಚಾಯತ್ ಗಳಲ್ಲಿ ಅರ್ ಟಿಸಿ ಗಳನ್ನು ಕೊಡುತ್ತಿದ್ದಾರೆ.ಆರ್ ಟಿಸಿಯ ಆಯುಸ್ಸು ಇರುವುದೇ 15 ದಿನ.ಹೀಗಿರುವಾಗ ಪ್ರಧಾನಿ ,ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಫೋಟೋ ಹಾಕಿ ಗಿಮಿಕ್ ಮಾಡುತ್ತಿದ್ದಾರೆ.ನಾವು ಭೂ ಸುಧಾರಣೆ ,ಅಕ್ರಮ ಸಕ್ರಮ ಯೋಜನೆ ಮೂಲಕ ಕೋಟ್ಯಂತರ ಜನರಿಗೆ ಸಹಾಯ ಮಾಡಿದ್ದೇವೆ.ಅದರೆ ನಾವು ಯಾವತ್ತೂ ಫೋಟೋ ಹಾಕಿಕೊಂಡಿಲ್ಲ.ಪಂಚಾಯತ್ ಗಳಲ್ಲಿ ಇವತ್ತು ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ ಮೊದಲು ಮಾಡಿ ಎಂದು ಮಾಜಿ ಸಚಿವ ಸೊರಕೆ ಹೇಳಿದ್ದಾರೆ.

Edited By : Manjunath H D
PublicNext

PublicNext

16/03/2022 03:28 pm

Cinque Terre

51.84 K

Cinque Terre

3

ಸಂಬಂಧಿತ ಸುದ್ದಿ