ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಕಂದಾಯ ಇಲಾಖೆ ಮನೆ ಬಾಗಿಲಿಗೆ- ಸುನೀಲ್‌ ಕುಮಾರ್ ಭೇಟಿ

ಮೂಡುಬಿದಿರೆ: ಕಂದಾಯ ದಾಖಲೆಗಳ ವಿನೂತನ ಯೋಜನೆಯನ್ನು ಈಗಾಗಲೇ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಭೂಮಿಯ ದಾಖಲೆಗಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರ್ಕಾರದ ಕ್ರಾಂತಿಕಾರಿ ಯೋಜನೆಯಾಗಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಪಡುಮಾರ್ನಾಡು ಗ್ರಾಮದ ಬ್ರಹ್ಮಶ್ರೀ ಮುಗೇರಕಳ ದೇವಸ್ಥಾನದ ಬಳಿ ಶನಿವಾರದಂದು ನಡೆದ ರೈತರಿಗೆ ಪಹಣಿ, ಜಮೀನಿನ ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ರೈತರ‌ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ 'ಕಂದಾಯ ದಾಖಲೆ ಮನೆ ಬಾಗಿಲಿಗೆ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಸಂಬಂಧಿಸಿದ ಆರ್.ಟಿ.ಸಿ ಮತ್ತು ಇನ್ನಿತರ ಸೇವೆಗಳನ್ನು ಜನರ ಬಳಿ ತಲುಪಿಸುವಲ್ಲಿ ಸರಕಾರ ಶ್ರಮಿಸುತ್ತಿದೆ. ಮುಂಚೆ ಯೋಜನೆಗಳು ಬೇಕಿದ್ದಲ್ಲಿ ತಾಲೂಕುಗಳಿಗೆ ಅಲೆದಾಡಬೇಕಿತ್ತು. ಆದರೆ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಮನೆ ಬಾಗಿಲಿಗೆ ಎಂಬ ಯೋಜನೆ ಬಂದಿದೆ. ಜಿಲ್ಲಾ‌ ಮಟ್ಟದ ಯೋಜನೆಯನ್ನು ಮೂಡುಬಿದಿರೆಯಲ್ಲಿ ಆರಂಭಿಸಲಾಗಿದೆ. ಹಾಗಾಗಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ತೆಂಗಿನ ಹೊಂಬಾಳೆಯನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರದಲ್ಲಿ 18 ಪಹಣಿ ಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ, ಶಾಸಕ ಉಮಾನಾಥ ಕೋಟ್ಯಾನ್, ಪಂ. ಗ್ರಾ. ಪಂ. ಅಧ್ಯಕ್ಷ ಕಲ್ಯಾಣಿ, ಮದನ್‌ ಮೋಹನ್ ಸಹಾಯಕ ಆಯುಕ್ತ,ಸಿ.ಇ.ಒ ಡಾ. ಕುಮಾರ್,ತಹಶಿಲ್ದಾರ ಪುಟ್ಟರಾಜು, ತಾ.ಪಂ. ಕಾರ್ಯನಿರ್ವಹನಾಧಿಕಾರಿ ದಯಾವತಿ, ಕೆ.ಸಿ., ಉಪಾಧ್ಯಕ್ಷ ಅಭಿನಂದನ್ ಬಳ್ಳಾಲ್, ಪಿಡಿಒ ಭೀಮನಾಯಕ್, ದಿಲೀಪ್ ರೋಡ್ಕರ್, ಎಸ್.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

12/03/2022 07:44 pm

Cinque Terre

20.3 K

Cinque Terre

0