ಮಂಗಳೂರು: ರಾಜ್ಯದಲ್ಲಿ ಮಂಡನೆಯಾಗಿರೋದು ರಿವರ್ಸ್ ಗೇರ್ ಬಜೆಟ್ ಆಗಿದ್ದು, ನಮಗೆಲ್ಲರಿಗೂ ನಿರಾಸೆ ತಂದಿದೆ. ಇದು ಸಾರಾಯಿ ಹಾಗೂ ಸಾಲದ ಮೇಲೆ ಅವಲಂಬಿತವಾಗಿರುವ ಬಜೆಟ್ ಎಂದು ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಪಥದಲ್ಲಿ ರಾಜ್ಯವನ್ನು ಹಿಂದಕ್ಕೆ ಹೊತ್ತೊಯ್ಯುವ ಬಜೆಟ್ ಇದಾಗಿದೆ. ಸಾಲವನ್ನು ಹೊರತುಪಡಿಸಿ ಇವರಿಂದ ಬೇರೆನೂ ಮಾಡಲು ಸಾಧ್ಯವಿಲ್ಲ. 2018ರವರೆಗೆ ಕಾಂಗ್ರೆಸ್ ಆಡಳಿತ ಕಾಲದಲ್ಲಿ ನಮ್ಮ ಸಾಲ ಭಾರೀ ಕಡಿಮೆಯಿತ್ತು. ಕೇವಲ ನಾಲ್ಕೇ ವರ್ಷಗಳಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ಸಾಲದ ಹೊರೆ ಡಬ್ಬಲ್ ಆಗಿದೆ ಎಂದರು.
ಈ ಬಜೆಟ್ ನಲ್ಲಿ ಕರಾವಳಿಗೆ ಒಂದೇ ಒಂದು ಹೊಸ ಯೋಜನೆ ನೀಡಿಲ್ಲ. ಕರಾವಳಿ ಪ್ರದೇಶದ ಜನರಿಗೆ ಇದು ದೋಖಾದ ಬಜೆಟ್ ಆಗಿದೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ರಾಜಕೀಯ, ಆರ್ಥಿಕವಾಗಿ ಅಂಗವಿಕಲ ಆಗಿದೆ ಎಂದು ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ವ್ಯಂಗ್ಯವಾಡಿದರು.
Kshetra Samachara
06/03/2022 09:26 pm