ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಚೊಚ್ಚಳ ಬಜೆಟ್ ಗೆ ಸಂಸದ ನಳಿನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಮಾತನಾಡಿದ ಕಟೀಲ್, ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿಯಾದ ಬಜೆಟ್ ಇದಾಗಿದೆ,ಕೃಷಿ, ಕಾರ್ಮಿಕರು, ಮಹಿಳೆಯರು ಮತ್ತು ಹಿಂದುಳಿದ ಸಮುದಾಯ ಗಮನದಲ್ಲಿಡಲಾಗಿದೆ ಎಂದು ಪ್ರಶಂಸಿಸಿದರು.
ಆರ್ಥಿಕ ಪುನಶ್ಚೇತನಕ್ಕೆ ಸುಂದರವಾದ ಬಜೆಟ್ ಮಂಡನೆಯಾಗಿದೆ. ಮೂಲಭೂತ ಸೌಕರ್ಯ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡಲಾಗಿದೆ.ಪರಿವರ್ತನೆ ಹಾದಿಯಲ್ಲಿ ನವ ಕರ್ನಾಟಕ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದ್ದಾರೆ ಕೃಷಿ ಪರವಾಗಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಅಭಿವೃದ್ಧಿಗಾಗಿ ಆರೋಗ್ಯ ಕ್ಷೇತ್ರದ ಬದಲಾವಣೆಗೆ ಕ್ಲಿನಿಕ್ ತೆರೆಯೋ ಯೋಜನೆ,ನಾರಾಯಣ ಗುರುಗಳ ಹೆಸರಲ್ಲಿ ವಸತಿ ಶಾಲೆ ತೆರೆಯುವ ಯೋಜನೆ ಇದೆ ನೀರಾವರಿ ಯೋಜನೆ ಮತ್ತು ಮೀನುಗಾರಿಕೆಗೂ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.
ಈ ಸರ್ವಸ್ಪರ್ಶಿ ಬಜೆಟ್ ಗಾಗಿ ಸಿಎಂಗೆ ಅಭಿನಂದನೆ ಸಲ್ಲಿಸ್ತೇನೆ ಉದ್ಯಮ ಕ್ಲಸ್ಟರ್ ಬೆಂಗಳೂರು ಹೊರತು ಪಡಿಸಿ ಘೋಷಣೆ ಮಾಡಿದ್ದಾರೆ.ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಮಂಗಳೂರನ್ನ ಆಯ್ಕೆ ಮಾಡಲಾಗಿದೆ. ಕರಾವಳಿಯ ಪಶ್ಚಿಮ ವಾಹಿನಿ ಯೋಜನೆಗಾಗಿ 500 ಕೋಟಿ ಇಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
PublicNext
04/03/2022 07:09 pm