ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್ ಹೋರಾಟದ ಹಿಂದೆ ಐಸಿಸ್ ಕೈವಾಡ; ಸಚಿವ ಆರ್ ಅಶೋಕ್ ಗಂಭೀರ ಆರೋಪ!

ಕಾರ್ಕಳ: ರಾಜ್ಯಾದ್ಯಂತ ಹಿಜಾಬ್ ಹೋರಾಟಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಂದಾಯ ಸಚಿವ ಆರ್ ಅಶೋಕ್,

ಪ್ರತಿಭಟನೆ ಮಾಡುತ್ತಿರುವುದು ವಿದ್ಯಾರ್ಥಿನಿಯರ ತಪ್ಪಿನಿಂದ ಅಲ್ಲ. ಪ್ರತಿಭಟನೆಯ ಹಿಂದೆ ಬಹಳಷ್ಟು ಜನ ಇದ್ದಾರೆ,ಹೋರಾಟ ಹಿಂದೆ ವಿದೇಶಿ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ? ಇಷ್ಟು ವೇಗವಾಗಿ ಇದರ ಹಿಂದೆ ಯಾರು ಕೆಲಸ ಮಾಡುತ್ತಿದ್ದಾರೆ? ಹಿಜಾಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ? ಇದರ ಹಿಂದೆ ಐಸಿಸ್ ,ಕೆಎಫ್ ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ ಎಂದರು.

ಮಕ್ಕಳು ಶಾಲೆಗೆ ಹೋಗೋದು ವಿದ್ಯಾಭ್ಯಾಸಕ್ಕೆ.ಧರ್ಮ ಪ್ರಚಾರಕ್ಕೆ ಶಾಲೆಗೆ ಹೋಗುತ್ತಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು.ನೀವು ನಿಮ್ಮ ಮನೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ. ಶಾಲೆ-ಕಾಲೇಜಿಗೆ ಕೇವಲ ವಿದ್ಯೆ ಕಲಿಯಲು ಮಾತ್ರ ಹೋಗಿ.

ಹಿಜಾಬ್ ಹೋರಾಟ ಮಾಡಿ ಎಂದು ಐಸಿಎಸ್ ಹೇಳಿಕೊಟ್ಟಿದೆ. ಮಕ್ಕಳು ಇರುವುದರಿಂದ ನಾವು ಹೆಚ್ಚು ಹಸ್ತಕ್ಷೇಪ ಮಾಡಲು ಆಗುವುದಿಲ್ಲ, ಹಂತಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವ ಆರ್ .ಅಶೋಕ್ ಹೇಳಿದ್ದಾರೆ.

Edited By : Shivu K
PublicNext

PublicNext

19/02/2022 05:29 pm

Cinque Terre

47.95 K

Cinque Terre

36

ಸಂಬಂಧಿತ ಸುದ್ದಿ