ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಬಿದಿರೆ: ಮಹಿಳೆಯರು ಸಬಲರಾಗಬೇಕು, ದುರ್ಬಲರಾಗಬಾರದು; ಪ್ರಸಾದ್ ಕುಮಾರ್

ಮೂಡಬಿದಿರೆ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲಾ ಕೌಶಲ್ಯಾಭಿವೃದ್ಧಿ ಕಚೇರಿ,ಜಿಲ್ಲಾ ಕೌಶಲ್ಯಾ ಮಿಶನ್ ಮಂಗಳೂರು ಹಾಗೂ ಮೂಡಬಿದಿರೆ ಪುರಸಭೆ ಸಹಯೋಗದಲ್ಲಿ ಡೇ ನಲ್ಮ್ ದೀನ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವು ಸಮಾಜ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮೂಡಬಿದಿರೆಯ ಪುರಾಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ “ ಸಾಲ-ಸೌಲಭ್ಯ ಹಾಗೂ ಹತ್ತು ಸಾವಿರದ ಸುತ್ತು ನಿಧಿಯ ಯೋಜನೆಯ ಸದ್ಭಾಳಕೆಯನ್ನು ಮಾಡಿ. ಸರ್ಕಾರವು ಮಹಿಳೆಯರು ಸಬಲರಾಗಬೇಕು ದುರ್ಬಲರಾಗಬಾರದೆಂಬ ಎಂಬ ಉದ್ದೇಶದಿಂದ ಉತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ನೀವು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿವೃದ್ಧಿ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ, ಬೀದಿಬದಿ ವ್ಯಾಪಾರಿಗಳಿಗೆ ಡೇ ನಲ್ಮ್ ಯೋಜನೆಯಲ್ಲಿ ಬೆಂಬಲ ಯೋಜನೆಯನ್ನು ಅಳವಡಿಸಲಾಗಿದ್ದು, ಬೀದಿಬದಿ ವ್ಯಾಪಾರಿಗಳಿಗೆ ತುರ್ತು ಸಾಲ ನಿಧಿ ಜಾರಿಯಲ್ಲಿದ್ದು, ಹೆಚ್ಚಿನ ವ್ಯಾಪಾರಿಗಳು ಇದರ ಸದ್ಭಾಳಕೆಯನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯಿಂದ ಮಹಿಳೆಯರನ್ನು ಸಶಕ್ತರನ್ನಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

Edited By :
Kshetra Samachara

Kshetra Samachara

17/02/2022 07:42 pm

Cinque Terre

3.91 K

Cinque Terre

0

ಸಂಬಂಧಿತ ಸುದ್ದಿ