ಉಡುಪಿ: ಹಿಜಾಬ್ ಪರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಹಿಂದಿರುವ ರಾಜಕೀಯ ನಿಲುವು ಬಹಿರಂಗಗೊಂಡಿದೆ. ಹಿಜಾಬ್ ಹೋರಾಟಗಾರರಿಗೆ ಉತ್ತರ ಪ್ರದೇಶ ಚುನಾವಣೆಯ ಚಿಂತೆ ಏಕೆ ಎಂದು ಶಾಸಕ ರಘುಪತಿ ಭಟ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಈ ವಿದ್ಯಾರ್ಥಿನಿಯರ ಪರವಾಗಿ ಹೈಕೋರ್ಟ್‌ನಲ್ಲಿ ಉತ್ತರ ಪ್ರದೇಶದ ಚುನಾವಣೆ ಮುಗಿಯುವವರೆಗೆ ಹಿಜಾಬ್ ಪ್ರಕರಣದ ವಿಚಾರಣೆ ಮುಂದೂಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಮತದಾನದ ಹಕ್ಕನ್ನು ಪಡೆಯದ ಇವರು ಉತ್ತರ ಪ್ರದೇಶ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿದ್ದು ಇವರ ಹಿಂದಿರುವ ಕಾಣದ ಕೈಗಳು ಯಾವುವು? ಎಂದು ರಘುಪತಿ ಭಟ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
Kshetra Samachara
15/02/2022 11:20 am