ಬಜಪೆ: ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪಡುಪೆರಾರ ಗ್ರಾಮದ ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನವನ್ನು ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಇಂದು ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ, ಉಪಾಧ್ಯಕ್ಷೆ ಸೇಸಮ್ಮ, ಪಂಚಾಯತ್ ಸದಸ್ಯರಾದ ಯಶವಂತ್ ಮುಂಡೇವು, ದೇವಪ್ಪ ಶೆಟ್ಟಿ, ಸೀತಾರಾಮ, ಜಯಂತ್ ಸಾಲ್ಯಾನ್, ಗಣೇಶ್ ಮುರ, ಗಣೇಶ್ ಅಳಿಕೆ, ವಿನೋದ್ , ವನಿತಾ, ಸುಜಾತ, ಮೀನಾಕ್ಷಿ, ಅರುಣ ಕೋಟ್ಯಾನ್, ವಿದ್ಯಾ ಜೋಗಿ, ಬಬಿತಾ, ಮೋಹಿನಿ, ಎಡಪದವು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಪಡುಪೆರಾರ ಶಕ್ತಿಕೇಂದ್ರ ಅಧ್ಯಕ್ಷ ಶೇಖರ ಸಫಲಿಗ, ಮೂಡುಪೆರಾರ ಶಕ್ತಿಕೇಂದ್ರ ಅಧ್ಯಕ್ಷ ಗುರು ಪ್ರಸಾದ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಿಣಿ ಸಮಿತಿ ಸದಸ್ಯಅನೂಜ್, ಉತ್ತರ ಮಂಡಲದ ಕಾರ್ಯಕಾರಿಣಿ ಸಮಿತಿ ಸದಸ್ಯ ಕಾಶೀನಾಥ್ ಕಾಮತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/02/2022 07:35 pm