ಉಡುಪಿ: ಕೊಲೆಗೆ ಸಂಚು ರೂಪಿಸಿದ ಆರೋಪಿಯನ್ನು ಜಾಮೀನು ಹಿಂಪಡೆದು ಬಂಧಿಸುವಂತೆ ಎಸ್‌ಪಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಂಬೇಡ್ಕರ್ ಯುವಸೇನೆ ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಅಂಚನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನನ್ನನ್ನು ಕೊಲೆ ಮಾಡಲು ನೆರೆಮನೆಯ ಮನ್ಸೂರ್ ಕೃಷ್ಣಾಪುರದ ವ್ಯಕ್ತಿಗಳಿಗೆ ಸುಪಾರಿ ನೀಡಿರುವುದು ತಿಳಿದುಬಂದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ಅನಂತರ ಆರೋಪಿಯನ್ನು ಬಂಧಿಸಲಾಗಿತ್ತು. ಆತ ಜಾಮೀನು ಪಡೆದು ಹೊರ ಬಂದು ಸಾಕ್ಷಿಗಳನ್ನು ಬೆದರಿಸಿ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾನೆ. ಹೀಗಾಗಿ ಜಾಮೀನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವಂತೆ ಆಗ್ರಹಿಸಲಾಗಿದೆ ಎಂದರು. ಯುವಸೇನೆಯ ವಸಂತ ಪಾದೆಬೆಟ್ಟು, ದಸಂಸ ಸದಸ್ಯ ಸದಾಶಿವ ಕಂಚಿನಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
04/02/2022 06:22 pm