ಉಡುಪಿ: ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಭಾವಚಿತ್ರ ಇಟ್ಟರೆ ತಾವು ಧ್ವಜಾರೋಹಣ ನೆರವೇರಿಸುವುದಿಲ್ಲ ಎಂದು ಹೇಳಿದ್ದಾರೆ.ಈ ಮೂಲಕ ಡಾ.ಅಂಬೇಡ್ಕರ್ ಅವರನ್ನು ಕೀಳು ಜಾತಿಯ ವ್ಯಕ್ತಿಯೆಂದು ಪರಿಗಣಿಸಿ ಜಾತಿ ನಿಂದನೆ ಮಾಡಿ ಸಂವಿಧಾನ ಶಿಲ್ಪಿಗೆ ಮತ್ತು ನ್ಯಾಯಪೀಠಕ್ಕೆ ಅವಮಾನ ಮಾಡಿದ್ದಾರೆ. ಇದು ಸಂವಿಧಾನಕ್ಕೆ ಮತ್ತು ದೇಶದ ಪ್ರಜಾಪ್ರಭುತ್ವಕ್ಕೆ ಮಾಡಿದ ಮಹಾ ದೋಹವಾಗಿದೆ. ನ್ಯಾಯಾಧೀಶರು ಕಾನೂನಿಗೇ ಭಂಗ ಉಂಟು ಮಾಡಿದ್ದಾರೆ. ಹಾಗಾಗಿ ಮಲ್ಲಿಕಾರ್ಜುನ ಗೌಡರ ಮೇಲೆ ದೇಶದ್ರೋಹ ಮತ್ತು ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಆಗ್ರಹಿಸಿದೆ. ಜಿಲ್ಲಾಧಿಕಾರಿಗೆ ಮನವಿ ನೀಡುವ ಸಂದರ್ಭ ರಿಪಬ್ಲಿಕನ್ ಪಾರ್ಟಿ ಆಫ್ ಕರ್ನಾಟಕದ ಪದಾಧಿಕಾರಿಗಳು ಕೂಡ ಹಾಜರಿದ್ಧರು.
Kshetra Samachara
01/02/2022 07:23 pm