ಬಜಪೆ : ಸಾರ್ವಜನಿಕರು ಮತ್ತು ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಆ ಮೂಲಕ ಜೀವನ ರೂಪಿಸಬೇಕು. ಈಗ ಡಿಜಿಟಲ್ ಯುಗವಾಗಿರುವುದರಿಂದ ಕಂಪ್ಯೂಟರ್ ಬಳಕೆಯ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಹೇಳಿದರು.ಅವರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕುಪ್ಪೆಪದವು ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಪುಸ್ತಕಗೂಡನ್ನುಲೋಕಾರ್ಪಣೆಗೊಳಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸ್ಚಚ್ಚತಾ ಭಿತ್ತಿಪತ್ರಗಳ ಅನಾವರಣವನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಡಿಪಿ ಹಮ್ಮಬ್ಬ, ಉಪಾಧ್ಯಕ್ಷೆ ವಿಮಲ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಿರಣ್ ರಾಜ್, ಜಿಲ್ಲಾ ಗ್ರಂಥಾಲಯಾಧಿಕಾರಿ ಗಾಯತ್ರಿ, ಪಂಚಾಯತ್ ಪಿಡಿಒ ಸವಿತಾ ಮಂದೋಲಿಕರ್, ಕಾರ್ಯದರ್ಶಿ ನವೀನ್, ಪ್ರಭಾರ ಕಾರ್ಯದರ್ಶಿ ಇಸ್ಮಾಯಿಲ್, ಗ್ರಾಮ ಪಂಚಾಯತ್ ಸದಸ್ಯರಾದ ನಿತೇಶ್ ಕುಮಾರ್, ಮಂಜುಳಾ, ವಿನೋದ್, ವಿಜಯ, ಪುಷ್ಪಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/01/2022 03:40 pm