ಉಡುಪಿ: ಖಾಸಗಿ ಬಸ್ ಮಾಲೀಕರ ಒತ್ತಡಕ್ಕೆ ಮಣಿದು ಸರಕಾರಿ ನರ್ಮ್ ಬಸ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಇವತ್ತು ಪ್ರತಿಭಟನೆ ನಡೆಯಿತು.ದರ ಏರಿಕೆ ಜೊತೆಗೆ ಎಲ್ಲ ರೂಟ್ ಗಳಲ್ಲಿ ಬಸ್ ಓಡಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಉಡುಪಿಯ ನರ್ಮ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ತಕ್ಷಣ ದರ ಏರಿಕೆ ವಾಪಾಸು ಪಡೆಯಬೇಕು, ಉಡುಪಿ ಗ್ರಾಮಾಂತರದ ಎಲ್ಲ ರೂಟ್ ಗಳಿಗೆ ಬಸ್ ಬಿಡಬೇಕು. ಎಲ್ಲ ಬಸ್ ನಿಲ್ದಾಣಗಳಲ್ಲಿ ವೇಳಾಪಟ್ಟಿ ಹಾಕಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.
ಸಿಐಟಿಯು ನ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಖಜಾಂಚಿ ಶಶಿಧರ್ ಗೊಲ್ಲ,ಸಿಐಟಿಯು ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್,ಎಸ್,ಉಮೇಶ್ ಕುಂದರ್,ನಳಿನಿ,ಸಂಜೀವ ಬಳ್ಕೂರು,ವಿದ್ಯಾರಾಜ್,ಸದಾಶಿವ ಬ್ರಹ್ಮವರ,ಉಪಸ್ಥಿತರಿದ್ದರು.
Kshetra Samachara
29/01/2022 07:47 pm