ಮಂಗಳೂರು: ಬೆಳ್ತಂಗಡಿಯಲ್ಲಿ ಮಹಿಳಾ ಅಧಿಕಾರಿ ವರ್ಗಾವಣೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ. ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರಿ ಜಾಗದಲ್ಲಿದ್ದ ಮರವನ್ನು ಕಡಿದಿದ್ದಾರೆ ಎಂಬ ಆರೋಪದಡಿ ವಾಹನವನ್ನು ಸೀಝ್ ಮಾಡಿದ್ದಕ್ಕೆ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಇದು ಗಂಭೀರ ವಿಚಾರ. ಈ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಫಾರೆಸ್ಟ್ ಸಮಿತಿ ಬಂದು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಈ ಕುರಿತು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಯಾರು ವರ್ಗಾವಣೆ ಮಾಡಿಸಿದ್ರು, ಯಾಕಾಯಿತು ಎಂಬುದನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಮರ ಕಡಿಯಲು ಅವರಿಗೆ ಅವಕಾಶ ಕೊಟ್ಟವರು ಯಾರು? ಅವರಿಗೆ ಹೇಗೆ ಧೈರ್ಯ ಬಂತು? ಎಂಬುದು ಪ್ರಶ್ನೆ. ಬಳ್ಳಾರಿಯಲ್ಲಿ ಆದ ಪರಿಸ್ಥಿತಿ ನಮ್ಮಲ್ಲಿ ಆಗಬಾರದು ಎಂದರು.
Kshetra Samachara
29/01/2022 07:36 pm