ಉಳಾಯಿಬೆಟ್ಟು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10ಲಕ್ಷ ರೂಪಾಯಿ ಅನುದಾನದಲ್ಲಿ ತೇಜಾಕ್ಷ ಕುಲಾಲ್ ಪೆರ್ಮಂಕಿ ರವರ ಮನೆಯ ಬಳಿ ಕಾಲುಸಂಕ ರಚನೆ ಮತ್ತು ಸುದರ್ಶನ್ ಶೆಟ್ಟಿ ಪೆರ್ಮಂಕಿ ಇವರ ಮನೆ ಬಳಿ ಕಾಲುಸಂಕ ನಿರ್ಮಾಣಕ್ಕಾಗಿ ಎರಡು ಕಾಮಗಾರಿಗಳಿಗೆ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಹರಿಕೇಶ ಶೆಟ್ಟಿ, ಉಪಾಧ್ಯಕ್ಷ ರತ್ನಾ, ಉಳಾಯಿಬೆಟ್ಟು ಶಕ್ತಿಕೇಂದ್ರ ಪ್ರಮುಖ್ ಶ್ರೀ ಕಮಲಾಕ್ಷ ತಲ್ಲಿಮಾರು, ಪಂಚಾಯತ್ ಸದಸ್ಯರಾದ ದಿನೇಶ್ ಬಜಿಲೊಟ್ಟು, ವಾರ್ಡ್ ಅಧ್ಯಕ್ಷರು ಕಿಶೋರ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
27/01/2022 05:05 pm