ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರೆ: ಭರವಸೆ ಈಡೇರಿಸದ ನವಯುಗ ಕಂಪೆನಿ: ಪಂಚಾಯತ್ ಮತ್ತು ಗ್ರಾಮಸ್ಥರಿಂದಲೇ ಕಚೇರಿಗೆ ಬೀಗ!

ಪಡುಬಿದ್ರೆ: ಹೆದ್ದಾರಿ ಬದಿ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬ ಹಾಗೂ ವಿದ್ಯುತ್ ದೀಪ ಉರಿಯದಿರುವುದರ ವಿರುದ್ಧ ಹೆದ್ದಾರಿ ಟೋಲ್ ಗೇಟ್ ಗುತ್ತಿಗೆದಾರ ಸಂಸ್ಥೆ ನವಯುಗ ಕಚೇರಿಗೆ ಬೀಗ ಜಡಿದ ಘಟನೆ ಉಡುಪಿಯ ಪಡುಬಿದ್ರಿಯಲ್ಲಿ ನಡೆದಿದೆ.

ಪಡುಬಿದ್ರಿ ಪೇಟೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಿ ವರ್ಷವಾದರೂ ದೀಪಗಳು ಉರಿಯುತ್ತಿಲ್ಲ.ಹಾಗೂ ಸರ್ವಿಸ್ ರಸ್ತೆಗಳ ಅಪೂರ್ಣ ಕಾಮಗಾರಿ ಬಗ್ಗೆ ಪಡುಬಿದ್ರಿ ಗ್ರಾ.ಪಂ.ಗೆ ಸಾರ್ವಜನಿಕರಿಂದ ಪದೇ ಪದೇ ದೂರುಗಳು ಕೇಳಿ ಬರುತ್ತಿದ್ದವು. ಹೀಗಾಗಿ ನವಯುಗ ಕಚೇರಿಗೆ ತೆರಳಿದ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು, ಸರಿಪಡಿಸುವ ಬಗ್ಗೆ ಲಿಖಿತವಾಗಿ ನೀಡುವಂತೆ ಒತ್ತಾಯಿಸಿದಾಗ ಅಲ್ಲಿಯ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪಂಚಾಯತ್ ಜನಪ್ರತಿಧಿಗಳು ಮತ್ತು ಸ್ಥಳೀಯರು ಸಿಬ್ಬಂದಿಯನ್ನು ಕಚೇರಿಯಿಂದ ಹೊರ ಕಳುಹಿಸಿ ಕಚೇರಿಗೆ ಬೀಗ ಜಡಿದಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

27/01/2022 03:16 pm

Cinque Terre

23.47 K

Cinque Terre

0