ಮುಲ್ಕಿ: ಕಿನ್ನಿಗೋಳಿ,ಮೆನ್ನಬೆಟ್ಟು ಮತ್ತು ಕಟೀಲು ಗ್ರಾಮ ಪಂಚಾಯತ್ ಗಳನ್ನು ಸೇರಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿದ್ದು ಇದರಿಂದ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸವಲತ್ತುಗಳಿಂದ ವಂಚಿತರಾಗುವುದರಿಂದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ರದ್ದುಪಡಿಸುವಂತೆ ಶಾಸಕ ಉಮಾನಾಥ ಕೊಟ್ಯಾನ್ ರಿಗೆ ಕಿನ್ನಿಗೋಳಿಯ ಶಾಸಕರ ಕಚೇರಿಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಮನವಿ ನೀಡಿದರು.
ಈ ಸಂದರ್ಭ ವೇದ ವ್ಯಾಸ ಉಡುಪ, ದೇವಿಪ್ರಸಾದ್ ಶೆಟ್ಟಿ, ಸಂಜೀವ ಮಡಿವಾಳ , ಡೇನಿಯಲ್ ಡಿಸೋಜ, ರಾಜೇಶ್ ಕುಂದರ್, ಪ್ರೇಮ್ ರಾಜ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಶ್ರೀಧರ ಅಳ್ವ, ಕಿರಣ್ ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ, ಜನಾರ್ಧನ ಕಿಲೆಂಜೂರು, ಚಂದ್ರಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/01/2022 10:47 am