ಮಂಗಳೂರು:ಇತ್ತೀಚಿಗೆ ಕಾಂಗ್ರೆಸ್ ಐಟಿ ಸೆಲ್‌ನ ಶೈಲಜಾ ಅವರು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮುಖಂಡೆ ಧನಲಕ್ಷ್ಮಿ ಗಟ್ಟಿ ಕಿಡಿಕಾರಿದ್ದಾರೆ. ಮಂಗಳೂರಲ್ಲಿ ಮಾಧ್ಯಮದವ್ರ ಜೊತೆಗೆ ಮಾತನಾಡಿದ ಅವರು,
ಪ್ರಧಾನಿ ಹಾಗೂ ಅಮಿತ್ ಶಾ ಅವರ ತಾಯಿಯ ಬಗ್ಗೆ ಮಾತನಾಡಿದ್ದಾರೆ. ಇದನ್ನ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡುವ ಶೈಲಜಾ ಅವರು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಹಾಗಾದ್ರೆ ಅವರ ಹಾಗೂ ಕಾಂಗ್ರೆಸ್ ನ ಸಂಸ್ಕೃತಿ ಏನೆಂಬುದು ನಮಗೆ ಗೊತ್ತಾಗುತ್ತದೆ.
ಗಿಳಿ ಪಾಠ ಮಾಡುವ ಕಾಂಗ್ರೆಸ್ಸಿನ ಹಿರಿಯ ನಾಯಕರು ಅವರ ಪಕ್ಷದ ಮಹಿಳಾ ನಾಯಕಿಯರಿಗೆ ಸಂಸ್ಕಾರವನ್ನು ಕಲಿಸಲಿ ಎಂದು ಸವಾಲು ಹಾಕಿದರು. ಇಂತಹ ನಾಯಕರು ಕೀಲಿ ಸಂಸ್ಕೃತಿಯನ್ನು ಇಟ್ಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅವರು ಹಾಗೆ ಎಂದು ಹೇಳಿಕೆ ನೀಡಿರುವ ಶೈಲಜಾ ಅವರು ಕೂಡಲೇ ಅದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
Kshetra Samachara
20/01/2022 09:13 pm