ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಾರಾಂತ್ಯ ಕರ್ಪ್ಯೂ ಗೆ ಸವಿತಾ ಸಮಾಜ ವಿರೋಧ ! ಡಿಸಿಗೆ ಮನವಿ

ಉಡುಪಿ: ಹಿಂದಿನ ಎರಡು ವರ್ಷ ಗಳಲ್ಲಿ ಎರಡೆರಡು ತಿಂಗಳ ಲಾಕ್ ಡೌನ್ ಹಾಗೂ ವಾರಾಂತ್ಯ ಲಾಕ್ ಡೌನ್ ನಿಂದ ದಿನಗೂಲಿ ನೌಕರರಂತೆ ದುಡಿಯುವ ಕ್ಷೌರಿಕ ಬಂಧುಗಳು ಆರ್ಥಿಕ ಸಂಕಷ್ಟಕ್ಜೆ ಸಿಲುಕಿದ್ದರು. ಈ ಬಾರಿ ಕೂಡ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿ ಅಷ್ಟೇನೂ ಜನಸಂದಣಿ ಆಗದ ಸಲೂನ್ ಗಳನ್ನು ಬಂದ್ ಮಾಡಿ ಮನೆಯಲ್ಲಿ ಇರುವ ಹಾಗೆ ಮಾಡಿದ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಸವಿತಾ ಸಮಾಜ ವಿರೋಧಿಸಿದೆ.

ಈ ಅವೈಜ್ಞಾನಿಕ ವಾರಾಂತ್ಯ ಕರ್ಫ್ಯೂ ನಿಂದ ಸಲೂನ್ ಪಾರ್ಲರ್ ಗಳಿಗೆ ವಿನಾಯತಿ ನೀಡಬೇಕೆಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಸವಿತಾ ಸಮಾಜದ ನಿಯೋಗವು ಮನವಿ ನೀಡಿತು.

ನಿಯೋಗದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರಾದ ವಿಶ್ವನಾಥ್ ಭಂಡಾರಿ ನಿಂಜೂರು, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್ ಆದಿಉಡುಪಿ,ಬನ್ನಂಜೆ ಗೋವಿಂದ ಭಂಡಾರಿ ಗೌರವಾಧ್ಯಕ್ಷರು , ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ರಾಜು ಭಂಡಾರಿ ಕಿನ್ನಿಮೂಲ್ಕಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

15/01/2022 07:14 pm

Cinque Terre

8.6 K

Cinque Terre

3

ಸಂಬಂಧಿತ ಸುದ್ದಿ