ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮೂಲಭೂತ ಸೌಕರ್ಯಗಳಿಗೆ ಉಗ್ರ ಹೋರಾಟ ಅನಿವಾರ್ಯ: ಹರೀಶ್ ಪುತ್ರನ್

ಮುಲ್ಕಿ: ಮುಲ್ಕಿ ಅಭಿವೃದ್ಧಿ ನಾಗರೀಕ ಸಮಿತಿ ಸಭೆ ಪುನರೂರು ಟೂರಿಸ್ಟ್ ಹೋಂನ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ನಾಗರಿಕ ಸಮಿತಿ ಸಭೆಯ ಅಧ್ಯಕ್ಷರಾದ ಹರೀಶ್ ಪುತ್ರನ್ ಮಾತನಾಡಿ ಕಳೆದ ಕೆಲ ವರ್ಷಗಳಿಂದ ಮುಲ್ಕಿ ನಾಗರಿಕರ ಸಮಸ್ಯೆಗಳಾದ ಹೆದ್ದಾರಿ ಅಕ್ರಮ ಟೋಲ್ ವಸೂಲಿ, ಸರ್ವಿಸ್ ರಸ್ತೆ ಅವ್ಯವಸ್ಥೆ, ಮುಲ್ಕಿಗೆ ಅಗ್ನಿಶಾಮಕ ದಳ, ಅಪೂರ್ಣ ತಾಲೂಕು ರಚನೆ ಹಾಗೂ ಕಚೇರಿ ಹಾಗೂ ಮುಲ್ಕಿಗೆ ಸೂಕ್ತ ಬಸ್ ನಿಲ್ದಾಣ, ಮತ್ತಿತರ ಸಮಸ್ಯೆಗಳನ್ನು ಈಡೇರಿಸುವಲ್ಲಿ ಶಾಸಕರು ಹಾಗೂ ಸಂಸದರು ನಿರ್ಲಕ್ಷಿಸುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚುನಾವಣಾ ಬಹಿಷ್ಕಾರ ಸಹಿತ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಸಮಿತಿಯ ಗೌರವಾಧ್ಯಕ್ಷರಾದ ಹರಿಕೃಷ್ಣ ಪುನರೂರು ಮಾತನಾಡಿ ಹೋರಾಟ ಮಾಡಿದರೆ ಮಾತ್ರ ಬೇಡಿಕೆ ಈಡೇರಿಕೆ ಸಾಧ್ಯ ಎಂದರು.

ಸಮಿತಿಯ ಜೀವನ್ ಶೆಟ್ಟಿ ಕಾರ್ನಾಡು ಮಾತನಾಡಿ ಮುಲ್ಕಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪೈಪುಗಳನ್ನು ಹಾಕಿದ್ದು ರಸ್ತೆಗಳು ಹಾಳಾಗಿದೆ ವಿನಹ ಕಾಮಗಾರಿ ಕಾರ್ಯಗತಗೊಂಡಿಲ್ಲ, ಒಳಚರಂಡಿ ವ್ಯವಸ್ಥೆ ಸರಿಯಾಗಬೇಕು, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ವಲಯವನ್ನು ಸರಿಪಡಿಸಬೇಕು, ಮುಲ್ಕಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಈ ಬಗ್ಗೆ ಶಾಸಕರಿಗೆ ಸಂಸದರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಕಾರ್ಯಗತಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ಮುಲ್ಕಿ ಜನತೆಯ ಇಚ್ಚಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಿದೆ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ ಎಂದರು.

ಸಭೆಯಲ್ಲಿ ಧನಂಜಯ ಮಟ್ಟು ಮಧು ಆಚಾರ್ಯ, ಕಿಶೋರ್ ಶೆಟ್ಟಿ ಬಪ್ಪನಾಡು, ಬಿರುವೆರ್ ಕುಡ್ಲ ಸಂಘಟನೆಯ ಕಿಶೋರ್ ಪೂಜಾರಿ ಮತ್ತಿತರರು ಮಾತನಾಡಿದರು.ವೇದಿಕೆಯಲ್ಲಿ ಡಾ.ಅಚ್ಯುತ ಕುಡ್ವ , ಇಕ್ಬಾಲ್ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

12/01/2022 02:28 pm

Cinque Terre

5.21 K

Cinque Terre

0

ಸಂಬಂಧಿತ ಸುದ್ದಿ