ಉಡುಪಿ: ನೈಟ್ ಕರ್ಫ್ಯೂ, ವೀಕೆಂಡ್ ಕರ್ಪ್ಯೂ ಗಳೆಲ್ಲವೂ ಬಡಜನರಿಗಷ್ಟೇ ಸೀಮಿತ. ಹಣ, ಜನಬಲ, ತೋಳ್ಬಲ ಉಳ್ಳವರಿಗಲ್ಲ ಎನ್ನುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವರ್ತನೆ, rally, ಪ್ರತಿಭಟನೆ, ಪಾದಯಾತ್ರೆಗಳೇ ಸಾಕ್ಷಿ ಎಂದು ಜಿಲ್ಲಾ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ , ಕೋವಿಡ್ ಸೋಂಕು ಮತ್ತಷ್ಟು ಹೆಚ್ಚುವ ಸಂಭವವಿದೆ. ಕಾಂಗ್ರೆಸ್ ನಾಯಕರು ರಾಜಕೀಯ ಹಠ ಬಿಟ್ಟು ಜನಾರೋಗ್ಯಕ್ಕೆ ಅಪಾಯಕಾರಿ ಆಗಬಹುದಾದ ಪಾದಯಾತ್ರೆ ಕೈ ಬಿಡದಿದ್ದರೆ ಹಾಗೂ ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನ ತೋರಿದರೆ ಹೈಕೋರ್ಟಿನಲ್ಲಿ ದಾವೆ ಹೂಡುತ್ತೇವೆ ಎಂದರು.
ಜ.17,18 ರಂದು ಉಡುಪಿ ಪರ್ಯಾಯ ವೈಭವದಿಂದ ನಡೆಸಲು ಸಿದ್ಧತೆಗಳಾಗಿವೆ. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗೆ ಕೋವಿಡ್ ಹೆಸರಲ್ಲಿ ಯಾವುದೇ ಅಡೆತಡೆ ಒಡ್ಡುವ ಯತ್ನ ಸಲ್ಲದು. ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ತೀವ್ರತೆ ಕಡಿಮೆಯಿದ್ದು, ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಉಡುಪಿ ಪರ್ಯಾಯ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಬೇಕು ಎಂದು ಹೇಳಿದರು.
Kshetra Samachara
11/01/2022 05:42 pm