ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬೇಡಿಕೆಗಳ ಈಡೇರಿಕೆಗೆ ದೇವರಿಗೆ ಮೊರೆ ಇಟ್ಟ ಅತಿಥಿ ಉಪನ್ಯಾಸಕರು!

ಮಂಗಳೂರು: ಸೇವಾ ಭದ್ರತೆ(ಸೇವಾ ವಿಲೀನತೆ) ಹಾಗೂ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ, ಪ್ರತಿಭಟನೆ ನಡೆಸಿರುವ ದ.ಕ.ಜಿಲ್ಲೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು 'ದೇವರ ಮೊರೆ' ಹೊಕ್ಕಿರುವ ಘಟನೆ ಇಂದು ನಡೆಯಿತು.

ದ.ಕ. ಜಿಲ್ಲೆಯ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ವತಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ ನಡೆಸಿ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನವನ್ನು ಅತಿಥಿ ಉಪನ್ಯಾಸಕರು ಮಾಡಿದರು. ಈ ನಿಟ್ಟಿನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುತ್ತಾರು ಶ್ರೀ ಕೊರಗಜ್ಜ ಕ್ಷೇತ್ರ, ಉಳ್ಳಾಲ ದರ್ಗಾ, ಉಳ್ಳಾಲದ ರಾಣಿ ಅಬ್ಬಕ್ಕ ಆರಾಧಿಸುತ್ತಿದ್ದ ಪಾರ್ಶ್ವನಾಥ ಸ್ವಾಮಿ ಬಸದಿ, ಮಂಗಳೂರಿನ ಧರ್ಮ ಪ್ರಾಂತ್ಯದ ಬಿಷಪ್ ನಿವಾಸದ ಚಾಪೆಲ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಸೇವಾ ಭದ್ರತೆ ಈಡೇರಿದ್ದಲ್ಲಿ ಕುತ್ತಾರು ಶ್ರೀ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡುವ ಸಂಕಲ್ಪ ಮಾಡಲಾಯಿತು. ದರ್ಗಾದ ಅಧ್ಯಕ್ಷರು, ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ನಿವಾಸದ ಸಾರ್ವಜನಿಕ ಸಂಪರ್ಕ ಅಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಳೆದ 30 ದಿನಗಳಿಂದ ಮುಷ್ಕರ, ಜಾಥಾ, ಪ್ರತಿಭಟನೆ, ತರಗತಿ ಬಹಿಷ್ಕರಿಸಿ ಸರ್ಕಾರವನ್ನು ಹಲವು ಬಾರಿ ಒತ್ತಾಯಿಸಿದ್ದರೂ ಸ್ಪಂದಿಸದೆ ಇರುವ ಕಾರಣ ದ.ಕ. ಜಿಲ್ಲೆಯ ಅತಿಥಿ ಉಪನ್ಯಾಸಕರ ವತಿಯಿಂದ ದೇವರಿಗೆ ಮೊರೆಯಿಡಲಾಯಿತು.

Edited By : Nagesh Gaonkar
Kshetra Samachara

Kshetra Samachara

10/01/2022 09:48 pm

Cinque Terre

16.57 K

Cinque Terre

2

ಸಂಬಂಧಿತ ಸುದ್ದಿ