ಬಜಪೆ : ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲು ವಾರ್ಡ್ ಸಂಖ್ಯೆ 20 ವ್ಯಾಪ್ತಿಯ ವಾಮಂಜೂರು ಜಂಕ್ಷನ್ ರಸ್ತೆಯಿಂದ ಪಿಲಿಕುಲ ನಿಸರ್ಗಧಾಮದ ಮಹಾದ್ವಾರದವರೆಗೆ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿ ಸುಮಾರು 22 ಲಕ್ಷ ರೂ ವೆಚ್ಚದಲ್ಲಿ ಅಳವಡಿಸಲಾದ ಎಲ್‍ಇಡಿ ಸಾಲು ದೀಪವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ-317ಡಿ ಪ್ರಾಂತೀಯ ಸಮ್ಮೇಳನ-ವಲಯ-3 ಇದರ ವತಿಯಿಂದ ವಾಮಂಜೂರಿನ ಪಿಲಿಕುಳ ರಸ್ತೆಯ ಆದಿಭಾಗದಲ್ಲಿ 2.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ `ವರ್ತುಲ ಉದ್ಯಾನ' ಉದ್ಘಾಟಿಸಲಾಯಿತು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ರಾಜೇಶ್ ಕೊಟ್ಟಾರಿ, ಲ. ವಸಂತ ಕುಮಾರ್ ಶೆಟ್ಟಿ, ಲ. ಸ್ವರೂಪಾ ಎಸ್ ಶೆಟ್ಟಿ, ಶಶಿಧರ ಮಾರ್ಲ, ಮೂಡುಶೆಡ್ಡೆ ಪಂಚಾಯತ್ ಅಧ್ಯಕ್ಷೆ ಜಯಶ್ರೀ, ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ರಾಜೀವ ಶೆಟ್ಟಿ ಸಲ್ಲಾಜೆ, ಲಕ್ಷ್ಮಣ್ ಶೆಟ್ಟಿಗಾರ, ಅನಿಲ್ ಕುಮಾರ್ ರೈ, ರಘು ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಮೋಹನದಾಸ್ ಶೆಟ್ಟಿ ನಿರೂಪಿಸಿ, ಎನ್ ಟಿ ರಾಜ ವಂದಿಸಿದರು.
Kshetra Samachara
02/01/2022 03:23 pm