ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪುರಸಭೆ ಫೈಟ್; ನಾಳೆ ಮತ ಎಣಿಕೆ, ವಿಜಯೋತ್ಸವಕ್ಕೆ ಬ್ರೇಕ್

ಕಾಪು: ಕಾಪು ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ (ಗುರುವಾರ) ಬೆಳಗ್ಗೆ 8ರಿಂದ ಆರಂಭವಾಗಲಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಯಾವುದೇ ವಾಹನಗಳು ಪುರಸಭೆ ಕಟ್ಟಡದ ಬಳಿ ಹೋಗುವಂತಿಲ್ಲ. ಎಲ್ಲ ವಾಹನಗಳನ್ನು ಕಾಂಚನ್ ಮೂಲಸ್ಥಾನ ಬಳಿಯ ರಸ್ತೆ ಪಕ್ಕ, ಮಾರಿಗುಡಿ ಹತ್ತಿರ ಹಾಗೂ ದಂಡತೀರ್ಥ ಶಾಲಾ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಜಾರಿಯಲ್ಲಿದ್ದು, ಯಾವುದೇ ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಕಾಪು ಠಾಣಾಧಿಕಾರಿ ರಾಘವೇಂದ್ರ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

29/12/2021 06:51 pm

Cinque Terre

11.7 K

Cinque Terre

0

ಸಂಬಂಧಿತ ಸುದ್ದಿ