ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ನಮ್ಮ ಶಾಪ ನಿಮಗೆ ತಟ್ಟದೇ ಇರಲ್ಲ"; ತೆರವು ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ಮಂಗಳೂರು: ಮಹಾನಗರ ಪಾಲಿಕೆಯು ನಗರದ ಬೀದಿಬದಿ ವ್ಯಾಪಾರಸ್ಥರನ್ನು ಏಕಾಏಕಿ ತೆರವುಗೊಳಿಸಿದ್ದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ಮಹಾನಗರಪಾಲಿಕೆ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಕಾರ್ಮಿಕ ಮುಖಂಡ ಬಿ.ಕೆ. ಇಮ್ತಿಯಾಝ್‌ ಮಾತನಾಡಿ, "ಮೇಯರ್‌ ಅವರೇ, ನೀವು ಕಾರ್ಪೊರೇಟರ್‌ ಅಥವಾ ಅದಕ್ಕೂ ಮೊದಲು ಇದೇ ಬೀದಿ ವ್ಯಾಪಾರಸ್ಥರಿಂದ ಬದುಕು ಕಟ್ಟಿಕೊಂಡವರು. ಅದೂ ಅಕ್ರಮವಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ನೀಡಿ ಬಡ್ಡಿ ವಸೂಲಿ ಮಾಡಿ, ಬದುಕು ಕಟ್ಟಿಕೊಂಡವರು.

ಅದನ್ನು ನೀವು ಮರೆಯಬಾರದು. ಇವತ್ತು ಅದೇ ಬೀದಿ ವ್ಯಾಪಾರಸ್ಥರ ಮೇಲೆ ದಾಳಿ ಮಾಡಿದ್ದೀರಿ" ಎಂದು ಆಕ್ರೋಶ ವ್ಯಕ್ತ ಪಡಿಸಿದರು. 2019ರಲ್ಲಿ ರಾಜ್ಯ ಸರಕಾರ ಬೀದಿ ಬದಿ ವ್ಯಾಪಾರಸ್ಥರಿಗೆ 5 ಕೆ.ಜಿ. ಅಕ್ಕಿಯಾದರೂ ಕೊಟ್ಟಿದೆ. ಆದರೆ, ನಗರಪಾಲಿಕೆ ಒಂದು ತುಂಡು ಅಕ್ಕಿ ಕೊಟ್ಟಿಲ್ಲ. ನಮ್ಮ ಶಾಪ ನಿಮಗೆ ತಟ್ಟದೇ ಇರಲ್ಲ" ಎಂದರು. ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

29/12/2021 04:50 pm

Cinque Terre

9.84 K

Cinque Terre

0

ಸಂಬಂಧಿತ ಸುದ್ದಿ