ಬಜಪೆ:ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ಪ್ರಪಂಚಕ್ಕೆ ವಿಶಿಷ್ಠವಾದ ವ್ಯಕ್ತಿ.ಅವರ ಹುಟ್ಟುಹಬ್ಬದ ದಿನದಂದು ಬಡವರಿಗೆ ಮನೆ ನಿರ್ಮಿಸಿ ಹಸ್ತಾಂತರಿಸುವ ವಿಜಯ ಯುವ ಸಂಗಮದ ಕಾರ್ಯ ಶ್ಲಾಘನೀಯ.ಮನೆಯನ್ನು ನಿರ್ಮಿಸಿ ಬಡಜನರಿಗೆ ಮತ್ತು ಸಾಮಾನ್ಯರಿಗೆ ಹಸ್ತಾಂತರಿಸುದೆಂದರೆ ಕರ್ನಾಟಕ ರಾಜ್ಯದಲ್ಲಿ ಇಂತಹ ಯುವಕ ಮಂಡಲಗಳು ಗಳು ಹೆಚ್ಚಬೇಕು ಅಲ್ಲದೆ ಸಮಾಜದ ನಡುವೆ ಶಕ್ತಿ ಬರಬೇಕು ಹಾಗೂ ಒಳ್ಳೆಯ ಕೆಲಸಗಳು ಆಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.ಅವರು ಶನಿವಾರದಂದು ವಿಜಯ ಯುವ ಸಂಗಮ ಎಕ್ಕಾರು ಸಂಸ್ಥೆಯ ರಜತ ವರ್ಷದ ಸವಿ ನೆನಪಿನಲ್ಲಿ 2ನೇ ಮನೆಯ ಕೊಡುಗೆಯಾಗಿ ಅಜಾತಶತ್ರು ಭಾರತದ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟು ಹಬ್ಬದ ದಿನದಂದು ಬಡಗ ಎಕ್ಕಾರು ಗ್ರಾಮದ ಬಡಕರೆಯಲ್ಲಿ ಶ್ರೀಮತಿ ಗೀತಾ ತಾರನಾಥ್ ಇವರಿಗೆ ಸಂಸ್ಥೆಯ ವತಿಯಿಂದ ನಿರ್ಮಿಸಿದ ನೂತನ ಮನೆ 'ಸಂಗಮ' ವನ್ನು ಹಸ್ತಾಂತರಿಸಿ ಮಾತನಾಡಿದರು.ಗೃಹ ಪ್ರವೇಶ ಕಾರ್ಯಕ್ರಮವು ಎಕ್ಕಾರು ಶ್ರೀ ಭಾಸ್ಕರ ಭಟ್ ಅವರ ಪೌರೋಹಿತ್ಯದಲ್ಲಿ ನೆರವೇರಿತು.
ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಮಾತನಾಡಿ ಆಶ್ರಯ ಇಲ್ಲದವರಿಗೆ ಆಶ್ರಯ,ಅನೇಕ ಸಾಮಾಜಿಕ,ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ ಎಂದರು.
ಈ ಸಂದರ್ಭ 3 ಎಕರೆ ಹಡಿಲು ಬಿದ್ದ ಗದ್ದೆಯಲ್ಲಿ ಎಕ್ಕಾರು ವಿಜಯ ಯುವ ಸಂಗಮದಿಂದ ಭತ್ತದ ಬೇಸಾಯ ಮಾಡಲಾಗಿದ್ದು,ಹುಲ್ಲನ್ನು 3 ಗೋ ಶಾಲೆಗಳಿಗೆ ಹಾಗೂ ಅಕ್ಕಿಯನ್ನು 125 ಮಂದಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಕ್ಕಾರು ಕೊಡಮಣೆತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ,ಬಾಜಪಾ ಜಿಲ್ಲಾಧ್ಯಕ್ಷ ಸುದರ್ಶನ್ ಎಂ,ಜಿ.ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ,ಬಾಜಪಾ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್,ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ, ಸಂಗಮದ ಅಧ್ಯಕ್ಷ ಅದರ್ಶ್ ಶೆಟ್ಟಿ ಎಕ್ಕಾರು,ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು,ಉದ್ಯಮಿಗಳಾದ ಭಾಸ್ಕರ ಶೆಟ್ಟಿ ನಡ್ಯೋಡಿಗುತ್ತು,ಮಂಜುನಾಥ ನಾಯಕ್ ಎಕ್ಕಾರು,ಚಂದ್ರಹಾಸ್ ಶೆಟ್ಟಿ ಬಡಕರೆಗುತ್ತು ಎಕ್ಕಾರು,ಜಯ ಶೆಟ್ಟಿ ದೊಡ್ಡಮನೆ ಎಕ್ಕಾರು,ಅನಂದ್ ಡಿ ಶೆಟ್ಟಿ ಅಜಿಲರ ಮನೆ ಎಕ್ಕಾರು,ದಯಾಶಂಕರ್ ಪಿ ಶೆಟ್ಟಿ ಕಾರ್ಪೋರೇಟರ್ ಮುಂಬಾಯಿ,ಥಾಣೆ ಬಂಟರ ಸಂಘ ಮುಂಬಾಯಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕರಂಬಾರು,ಕಟೀಲು - ಎಕ್ಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ರೈ,ಬಾಲಕೃಷ್ಣ ಶೆಟ್ಟಿ ಹೊಸಲಕ್ಕೆ ಬಡಕರೆಗುತ್ತು ಎಕ್ಕಾರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/12/2021 01:41 pm