ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಬಿದ್ರೆ:ಸರಕಾರಿ ಶಾಲೆಗಳಲ್ಲಿ ಉನ್ನತ ಶಿಕ್ಷಣಕ್ಕೆ ಸರಕಾರ ಒತ್ತು ನೀಡಬೇಕು: ರಾಜಶೇಖರ ಕೋಟ್ಯಾನ್

ಮೂಡುಬಿದಿರೆ :ಪುಚ್ಚಮೊಗರು.ಸ.ಹಿ.ಪ್ರಾ.ಶಾಲೆಗೆ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜಶೇಖರ್ ಕೋಟ್ಯಾನ್ ರವರು ಭೇಟಿ ನೀಡಿ ಶಾಲೆ ಯ ಕಟ್ಟಡ ದುರಸ್ತಿ ಮಾಡಲು 25000 ರೂಪಾಯಿ ದೇಣಿಗೆ ಚೆಕ್ ನೀಡಿದರು ಹಾಗೂ ಶಾಲೆಯ ಮಕ್ಕಳಿಗೆ ಬೆಲ್ಟ್ ವಿತರಣೆ ನಡೆಸಿ ಪ್ರೋತ್ಸಾಹ ನೀಡಿದರು.

ಈ ಸಂದರ್ಭ ಅವರು ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಲಿಯುವಿಕೆಗೆ ಪೋಷಕರು ಸಹಿತ ಶಿಕ್ಷಕರು ಪ್ರೋತ್ಸಾಹಿಸಬೇಕು ಹಾಗೂ ಸರಕಾರ ಈ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಡಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಮಟ್ಟು ,ಸುರೇಶ್ ಕೋಟ್ಯಾನ್,ಬಾಲಚಂದ್ರ ಕಾಮತ್. ಕುಮಾರ್ ಪೂಜಾರಿ.ವಾಸು ಪೂಜಾರಿಮತ್ತು ಪಂಚಾಯತ್ ಸದಸ್ಯರು, ಹಾಗು ಶಾಲಾಭಿವೃಧಿ ಸಮಿತಿಯ ಅಧ್ಯಕ್ಷರು.ಸದಸ್ಯರು.ಮತ್ತು ಪೋಷಕರು ಉಪಸ್ಠಿತರಿದ್ದರು.

Edited By :
Kshetra Samachara

Kshetra Samachara

26/12/2021 07:47 am

Cinque Terre

7.33 K

Cinque Terre

0

ಸಂಬಂಧಿತ ಸುದ್ದಿ