ಮುಲ್ಕಿ:ಕಿನ್ನಿಗೋಳಿ ಅಭಿವೃದ್ದಿಹೊಂದಬೇಕು ಎಂಬ ಕಾರಣದಿಂದ ಕಿನ್ನಿಗೋಳಿಯನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಬೇಕು ಎಂಬ ದೃಷ್ಟಿಯಿಂದ ನಮ್ಮ ನಾಯಕರಾದ ಅಭಯಚಂದ್ರಜೈನ್ ಕಿನ್ನಿಗೋಳಿಯನ್ನು ಪಟ್ಟಣ ಪಂಚಾಯತ್ ಆಗಿ ಮಾಡಲು ಪ್ರಸ್ಸಾವನೆ ಸಲ್ಲಿಸಿದ್ದರು ಆದರೆ ಬಿಜೆಪಿಯವರು ದುರುದ್ದೇಶದಿಂದ ಮೆನ್ನ ಬೆಟ್ಟು ಮತ್ತು ಕಟೀಲು ಗ್ರಾಮ ಪಂಚಾಯತ್ ನ್ನು ಕಿನ್ನಿಗೋಳಿಗೆ ಸೇರಿಸಿ ಪಟ್ಟಣ ಪಂಚಾಯತ್ ಆಗಿ ಮಾಡಿದ್ದಾರೆ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಆರೋಪಿಸಿದರು
ಅವರು ಹಳೆಯಂಗಡಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿ ಕಿನ್ನಿಗೋಳಿ ಪಂಚಾಯತ್ ಕಾಂಗ್ರೇಸ್ ಭದ್ರಕೋಟೆಯಾಗಿದ್ದು ಕಟೀಲು ಮತ್ತು ಮೆನ್ನ ಬೆಟ್ಟು ಪಂಚಾಯತ್ ನ್ನು ಕಿನ್ನಿಗೋಳಿಗೆ ಸೇರಿಸಿದರೆ ಸುಲಭದಲ್ಲಿ ಅಧಿಕಾರ ಹಿಡಿಯಬಹುದು ಎಂಬುದು ಬಿಜೆಪಿ ನಾಯಕರ ದುರುದ್ದೇಶ ವಾಗಿತ್ತು, ಕಟೀಲು ಮತ್ತು ಮೆನ್ನಬೆಟ್ಟು ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ತೀರ ಹಳ್ಳಿ ಪ್ರದೇಶಗಳಾಗಿದೆ, ಪಟ್ಟಣ ಪಂಚಾಯತ್ ಆದ ಕಾರಣ ಇಲ್ಲಿನ ಜನರಿಗೆ ಮತ್ತಷ್ಟು ತೊಂದರೆಯಾಗಿದೆ, ಗ್ರಾಮಸ್ಥರು ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಪಟ್ಟಣ ಪಂಚಾಯತ್ ಆಗಿ ಪರಿವರ್ತಿಸಲು ಬೆಂಬಲಿಸಿದ ಬಿಜೆಪಿಯವರೇ ಪ್ರತಿಭಟನೆ ಈಗ ಪ್ರತಿಭಟನೆ ನಡೆಸುತ್ತಿರುವುದು ವಿಪರ್ಯಾಸ ಎಂದರು
Kshetra Samachara
24/12/2021 06:50 pm