ಮಂಗಳೂರು:ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಲ ಎಂದಿದ್ದಾರೆ. ರಾಜ್ಯ ಅಧ್ಯಕ್ಷರನ್ನು ದುರ್ಬಲ ಎಂದಾಕ್ಷಣ ಅವರು ದುರ್ಬಲ ಆಗಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರ ರಾಜೀನಾಮೆ ಕೇಳಿದ್ರೆ ಅವ್ರು ರಾಜೀನಾಮೆ ಕೊಡಲು ನೀವು ಕೊಟ್ಟ ಭಿಕ್ಷೆ ಅಲ್ಲ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಕಿಡಿಕಾರಿದ್ದಾರೆ.
ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನ ಸಂಘಟನೆ ಕೊಟ್ಟಿರುವ ಜವಾಬ್ದಾರಿ ಅದು. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಜೀ ರಾಜ್ಯಾಧ್ಯಕ್ಷರ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಅವ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಯಶಸ್ವಿಯಾಗಿ ಸಂಘಟನೆಯಾಗಿದೆ. ಅನೇಕ ಚುನಾವಣೆಗಳನ್ನು ಎದುರಿಸಿದ್ದೇವೆ. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಂಪಾದಿಸಿದ್ದೇವೆ.
ಈ ಬರಹಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಪತ್ರಿಕಾಗೋಷ್ಠಿ ಕರೆದಿದ್ದೇವೆ. ಇದ್ರ ಹಿಂದೆ ಕೆಲವು ಅತೃಪ್ತ ಆತ್ಮಗಳು ಕಾರ್ಯ ನಿರ್ವಹಿಸುತ್ತಿದೆ. ಕೆಲವು ಕಾಣದ ಕೈಗಳು ಕೆಲಸ ಮಾಡ್ತಾ ಇವೆ.
ಬಿಜೆಪಿ ಮತ್ತು ಜಿಲ್ಲೆಯ ಹಿಂದೂ ಸಂಘಟನೆಯ ಮಧ್ಯೆ ಬಿರುಕು ಮಾಡಿಸ್ಬೇಕು. ಇದ್ರ ಮುಖಾಂತರ ಬಿಜೆಪಿ ಭದ್ರ ಕೋಟೆ ಆಗಿರುವ ದ.ಕ ಜಿಲ್ಲೆಯನ್ನು ಹೊಡಿಬೇಕೆನ್ನುವ ಹುನ್ನಾರ ನಡಿತಿದೆ ಎಂದು ಆಪಾದಿಸಿದರು. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪ್ರಶ್ನೆ ಬರ್ತಾಇದೆ. ರಾಜ್ಯಾಧ್ಯಕ್ಷರು ಏನು ಮಾಡ್ತಾ ಇದ್ದಾರೆ..? ರಾಜ್ಯಾಧ್ಯಕ್ಷರು ಹಿಂದೂ ಸಂಘಟನೆಯ ಹಿನ್ನೆಲೆಯಿಂದ ಬಂದವರು.
ನಾನು ಬಜರಂಗ ದಳದ ಜಿಲ್ಲಾ ಸಂಚಲಕನಾಗಿ ಕೆಲಸ ಮಾಡಿ ಈ ಜವಾಬ್ದಾರಿಗೆ ಬಂದಿದ್ದೇನೆ. ನಮಗೆ ಗೊತ್ತಿದೆ ಬಜರಂಗ ದಳದ ಕಾರ್ಯಕರ್ತರ ಜವಾಬ್ದಾರಿ ಏನು..? ಯಾರು ನೈಜ ಕಾರ್ಯಕರ್ತರು..? ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡ್ತಾರೆ. ಅವರಿಗೆ ನಾವು ಯಾವ ರೀತಿ ಸಹಾಯ ಮಾಡಬೇಕು. ಇದ್ರ ಬಗ್ಗೆ ಸಂಪೂರ್ಣ ನಮಗೆ ಗೊತ್ತಿದೆ.
ರಾಜ್ಯಾಧ್ಯಕ್ಷರು,ಜಿಲ್ಲಾ ಶಾಸಕರು ನಮ್ಮ ಬಜರಂಗ ದಳದ ಕಾರ್ಯಕರ್ತರು ಸಮಸ್ಯೆಯಲ್ಲಿ ಬಿದ್ದಾಗ ಅವ್ರಿಗೆ ಮಾಡಿದ ಆರ್ಥಿಕ ಸಹಾಯ. ಕಾರ್ಯಕರ್ತರ ಮನೆಯಲ್ಲಿ ಮದುವೆ ಸಮಾರಂಭಕ್ಕೆ ಮಾಡಿದ ಸಹಾಯ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಾಡಿದ ಸಹಾಯ. ಕಾರ್ಯಕರ್ತರು ಆಸ್ಪತ್ರೆ ದಾಖಲಾದಾಗ ಮಾಡಿದ ಸಹಾಯ. ಇದೆಲ್ಲ ನಾವು ಪ್ರಚಾರಕ್ಕೆ ಮಾಡ್ತಾ ಇಲ್ಲ ಇದು ಕರ್ತವ್ಯ ನಮ್ಮ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ಶಾಸಕರು ನಿತ್ಯ ನಿರಂತರ ಈ ರೀತಿಯ ಕಾರ್ಯ ಮಾಡ್ತಾ ಇದ್ದಾರೆ. ಈ ಹೇಳಿಕೆ ಹಿಂದೆ ಎರಡು ಮೂರು ಅಂಶಗಳಿವೆ.ಕಳೆದ ಅವಧಿಯಲ್ಲಿ ರಾಜ್ಯಾಧ್ಯಕ್ಷರ ಬಗ್ಗೆ ತೆಗಳಿಕೆ ಮಾತು ಹಾಕಿದವರೇ ಕಳೆದ ಚುನಾವಣೆಯಲ್ಲಿ ಹೊಗಳಿ ಬರೆದಿದ್ದಾರೆ ಎಂದರು.
Kshetra Samachara
16/12/2021 09:22 pm