ಉಡುಪಿ: ಇಂದು ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಧಾನಪರಿಷತ್ ಚುನಾವಣೆಯಲ್ಲಿ ಅತ್ಯಧಿಕ ಮತದಿಂದ ಜಯಭೇರಿ ಪಡೆದ ಕೋಟ ಶ್ರೀನಿವಾಸ ಪೂಜಾರಿ ಗೆದ್ದ ಕೂಡಲೇ ಭಾರತೀಯ ಜನತಾ ಪಾರ್ಟಿಯ ಉಡುಪಿ ಜಿಲ್ಲಾ ಹಿರಿಯರಾದ ಮತ್ತು ಉಡುಪಿ ಪುರಸಭೆಯ ಮಾಜಿ ಅಧ್ಯಕ್ಷರಾದ ಮಲ್ಪೆ ಸೋಮಶೇಖರ್ ಭಟ್ ಮನೆಗೆ ತೆರಳಿ ಅವರ ಆಶೀರ್ವಾದ ಪಡೆದರು.
ತೃತೀಯ ಬಾರಿಗೆ ಗೆದ್ದ ಕೋಟ ಶ್ರೀನಿವಾಸ ಪೂಜಾರಿ ಇವರಿಗೆ ಹೂವಿನ ಮಾಲೆ ಮತ್ತು ಶಾಲುಹೊದಿಸಿ ಗೌರವಿಸಿದ ಸೋಮಶೇಖರ್ ಭಟ್ ಅವರು ನಿಮ್ಮಿಂದ ಮತ್ತಷ್ಟು ಜನ ಸೇವೆಯಾಗಿ ರಾಜ್ಯಕ್ಕೆ ಒಳಿತಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷರಾದ ಕೆ ರಾಘವೇಂದ್ರ ಕಿಣಿ, ಉಡುಪಿ ನಗರಸಭೆಯ ಸ್ಥಾಯಿ ಸಮಿತಿಅಧ್ಯಕ್ಷರಾದ ಗಿರೀಶ್ಎಂ ಅಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ದಿನಕರ** ಪೂಜಾರಿ ಕುಂಜಿಬೆಟ್ಟು,ಕೃಷ್ಣ ಆಚಾರ್ಯ ಕಡಿಯಾಳಿ ಉಪಸ್ಥಿತರಿದ್ದರು.
Kshetra Samachara
14/12/2021 08:35 pm